ಅಽಕಾರಿ ಬೆವರಿಳಿಸಿದ ಅನ್ನದಾತರು

ಯಾದಗಿರಿ ಜಿಲ್ಲೆಯ ವಡಗೇರಾ ಜೆಸ್ಕಾಂ ಕಚೇರಿ ಬಳಿ ಗುರುವಾರ ಜಮಾಗೊಂಡ ಪ್ರತಿಭಟನಾಕಾರರು.
ಯಾದಗಿರಿ ಜಿಲ್ಲೆಯ ವಡಗೇರಾ ಜೆಸ್ಕಾಂ ಕಚೇರಿ ಬಳಿ ಗುರುವಾರ ಜಮಾಗೊಂಡ ಪ್ರತಿಭಟನಾಕಾರರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಜೆಸ್ಕಾಂ ಕಚೇರಿಗೆ ಮುತ್ತಿಗೆ
  • ವಿದ್ಯುತ್ ಪೂರೈಕೆಯಲ್ಲಿ ವಿ-Àಲ
  • ಭತ್ತ ನಾಟಿಗೆ ತೀವ್ರ ಸಮಸ್ಯೆ
ವಡಗೇರಾ; ಕಳೆದ ಒಂದು ತಿಂಗಳಿAದ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ವಿ-Àಲವಾದ ಇಲ್ಲಿನ ಜೆಸ್ಕಾಂ ಕಚೇರಿಗೆ ಹತ್ತಕ್ಕು ಹೆಚ್ಚು ಗ್ರಾಮಗಳ ನೂರಾರು ರೈತರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರಿಗೆ ಸತತ ೭ ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ನಿಯಮ ಇದ್ದರೂ ಒಂದೆರಡು ತಾಸು ನೀಡಿ ನಂತರ ಬಂದ್ ಮಾಡುವ ಮೂಲಕ ಜೆಸ್ಕಾಂ ಅಽಕಾರಿ ಮತ್ತು ಸಿಬ್ಬಂದಿ ಕಣ್ಣು ಮುಚ್ಚಾಲೆ ಆಟವಾಡುತ್ತಿದ್ದು, ಇದರಿಂದ ರೊಚ್ಚಿಗೆದ್ದ ವಡಗೇರಾ ಸುತ್ತಲಿನ ಗ್ರಾಮಗಳ ರೈತರು ಭತ್ತ ನಾಟಿ ಮಾಡಲು ಆಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಗುರುವಾರ ಬೆಳಗ್ಗೆ ೧೦ರ ಸುಮಾರಿಗೆ ಜೆಸ್ಕಾಂನ ೧೧೦/೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಲಗ್ಗೆ ಇಟ್ಟು ಒಳಗಿದ್ದ ಸಿಬ್ಬಂದಿಯನ್ನು ಹೊರಗೆ ಹಾಕಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಬಿತ್ತನೆಗಾಗಿ ಭತ್ತ ನಾಟಿ ಮಾಡುವ ಸಮಯವಿದು. ಮಳೆ ಆಗಿಲ್ಲ, ನದಿ ಬತ್ತುತ್ತಿದೆ. ಈ ವೇಳೆ ಸಮರ್ಪಕ ವಿದ್ಯುತ್ ಪೂರೈಸಿದರೆ ಗದ್ದೆಗಳಿಗೆ ನೀರು ಸಂಗ್ರಹಿಸಿ ಭತ್ತ ನಾಟಿ ಮಾಡಬಹುದು. ಆದರೆ ಇಂತಹ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡದೆ ರೈತರೊಂದಿಗೆ ಜೆಸ್ಕಾಂ ಅಽಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಅಽಕಾರಿಗಳನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು, ಕಳೆದ ಅನೇಕ ತಿಂಗಳಿAದ ಹೀಗೆ ರೈತರೊಂದಿಗೆ ವಿದ್ಯುತ್ ನೀಡುವ ವಿಷಯಕ್ಕೆ ಕಳ್ಳಾಟವಾಡುತ್ತಿದ್ದೀರಿ. ನಿಮಗೆ ಹೇಳುವವರು ಮತ್ತು ಕೇಳುವವರು ಯಾರು ಇಲ್ಲವೇ ಎಂದು ಬೆವರಿಳಿಸಿದರು.
ಬೇಕಾಬಿಟ್ಟಿ ವಿದ್ಯುತ್ ತೆಗೆಯುತ್ತೀರಿ, ಅನೇಕ ಸಲ ೨೪ ತಾಸು ಕರೆಂಟ್ ಇರುವುದಿಲ್ಲ, ನೀವು ಕೆಲಸ ಮಾಡಲು ಬಂದಿದ್ದಿರೋ? ಇಲ್ಲವೇ ಸಾರ್ವಜನಿಕರಿಗೆ ತೊಂದರೆ ಕೊಡಲು ಇದ್ದಿರೋ ಎಂದು ರೈತರು ಮುಖದ ಮೇಲೆಯೇ ಜಾಡಿಸಿದರು. ಸುಮಾರು ಮೂರು ತಾಸು ಇಡೀ ಜೆಸ್ಕಾಂನ ೧೧೦/೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಸುತ್ತುವರೆದ ರೈತರು ಅನೇಕ ತಿಂಗಳುಗಳಿAದ ಹಿಡಿದಿಟ್ಟುಕೊಂಡಿದ್ದ ಸಿಟ್ಟು ಹೊರ ಹಾಕುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆ ಜನರು ಬೀದಿಗೆ ಬಂದರೆ ಏನಾಗುತ್ತದೆ ಎಂಬುವುದನ್ನು ವಡಗೇರಾ ಸೇರಿ ಹತ್ತಾರು ಹಳ್ಳಿಗಳ ರೈತರು ಸಾಕ್ಷಿಕರಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಪಂ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚನ್ನೂರ ಅವರು ರೈತರು ಮತ್ತು ಅಽಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿ ಶಾಂತಗೊಳಿಸಿದರು. ಎಇಇ ಮಾರ್ಕಂಡೇಶ್ವರ, ಸೆಕ್ಷನ್ ಆಫೀಸರ್ ಥಾಮಸ್, ದೇವಪ್ಪ ಮತ್ತು ಸಿಬ್ಬಂದಿ ಇದ್ದರು. ಅಲ್ಲಿದ್ದ ಪೊಲೀಸ್ ಅಽಕಾರಿ ಮತ್ತು ಸಿಬ್ಬಂದಿ ಕೂಡ ರೈತರನ್ನು ಸಮಜಾಷಿಸಿದರು. ಬೆಂಡೆಬAಬಳಿ, ಗೊಂದೆನೂರ, ಚನ್ನೂರ, ಕೊಂಕಲ್, ತುಮಕೂರು, ಮಾಚನೂರ, ಬಿಳ್ಹಾರ, ಕಂದಳ್ಳಿ, ಕುರಿಹಾಳ, ಅರ್ಜುಣಗಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚೇತನ ಸಾಹುಕಾರ, ರವಿ ಚನ್ನೂರ, ನರಸಿಂಹರಾಜು, ಮಂಜುನಾಥರಡ್ಡಿ ಚನ್ನೂರ, ಅಮಾತೆಪ್ಪ ಹುಬ್ಬಳ್ಳಿ, ಶಿವುಗೌಡ ಕುರಿಹಾಳ, ಉಮೇಶ ಪಾಟೀಲ್, ಶಾಂತಪ್ಪ ಅಂಗಡಿ, ದೇವಪ್ಪ ಚನ್ನೂರ ಸೇರಿದಂತೆಯೇ ಇತರರಿದ್ದರು. ಸ್ಥಳದಲ್ಲಿ ಹೆಚ್ಚಿನ ಪೊಲೀಸರಿದ್ದು ಬಂದೋಬಸ್ತ ಮಾಡಿದ್ದರು.

ಅಽಕಾರಿಗಳು ಆಡಿದ್ದೇ ಆಟ

೩೦-೪೦ ವರ್ಷದ ಹಳೇ ವಿದ್ಯುತ್ ಕಂಬಳಿದ್ದು, ತಂತಿ ಎಲ್ಲೆಂದರಲ್ಲಿ ಜೋತು ಬಿದ್ದಿವೆ. ಸ್ವಲ್ಪ ಗಾಳಿ, ಮಳೆ ಬಂದರೂ ಕರೆಂಟ್ ಹೊಗುತ್ತೆ, ಇದು ಗೊತ್ತಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಿಂದುಳಿದ ಜಿಲ್ಲೆಯ ಮುಗ್ದ ಜನರು ನಮಗೇನು ಮಾಡುತ್ತಾರೆ ಎಂದು ಅಽಕಾರಿಗಳು ತಾವು ಆಡಿದ್ದೇ ಆಟ ಎಂಬAತೆ ವರ್ತಿಸುತ್ತಿದ್ದಾರೆ ಎಂದು ರೈತರು ಸಿಟ್ಟಿಗೆದ್ದರು. ಕರೆಂಟ್ ಹೋದಾಗ ವಿಚಾರಿಸಿದರೆ ಸಕಾಲಕ್ಕೆ ಪೋನ್ ಎತ್ತುವುದೇ ಇಲ್ಲ. ಕಚೇರಿಗೆ ಬಂದೂ ವಿಚಾರಿಸಿದರೂ ಡೊಂಟ್ ಕೇರ್ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ನಮ್ಮ ಜನಪ್ರತಿನಿಽಗಳಿಗೆ ರೈತರು ಸುಖದಿಂದ ಇರುವುದು ಬೇಡವಾಗಿದೆ. ಅವರಿಗೂ ಹೇಳಿದರೂ ಆಯಿತು ನೋಡೊಣ ಎಂದು ಕೈತೊಳೆದುಕೊಳ್ಳುತ್ತಾರೆ. ಹೀಗಾದರೆ ನಾವು ಯಾರಿಗೆ ಕೇಳಬೇಕೆಂದು ಅಲ್ಲಿದ್ದ ಅಽಕಾರಿಗಳ ಮುಂದೆ ರೈತರು ಒಂದೇ ಸವನೇ ಆರೋಪದ ಸುರಿಮಳೆಗೈದರು.

ವಡಗೇರಾ ಬಂದ್ ಎಚ್ಚರಿಕೆ

ಈಗಾಗಲೇ ಮಳೆ ಇಲ್ಲದೆ ರೈತರು ಮುಗಿಲು ನೋಡುವ ಸ್ಥಿತಿ ಎದುರಾಗಿದೆ. ಬಿತ್ತನೆ ಮಾಡಿದ ಬೆಳೆ ಒಣಗುತ್ತಿವೆ, ಈ ವೇಳೆ ಭತ್ತ ನಾಟಿ ಮಾಡಬೇಕೆಂದರೆ ಜೆಸ್ಕಾಂ ಅಽಕಾರಿಗಳು ಅನ್ನದಾತನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿದ್ದಾರೆ. ಇದು ಕೊನೇ ವಾರ್ನಿಂಗ್, ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಇಲ್ಲದಿದ್ದರೆ ವಡಗೇರಾ ಸಂಪೂರ್ಣ ಬಂದ್ ಮಾಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಜೆಸ್ಕಾಂ ಅಽಕಾರಿಗಳನ್ನು ಸುತ್ತುವರೆದ ರೈತರು ಪ್ರಶ್ನೆಗಳ ಸುರಿಮಳೆಗೈದರು. ಇದರಿಂದ ಗಾಬರಿಗೊಂಡAತೆ ಆದ ಅಽಕಾರಿ ಬಿಟ್ಟ ಬೇವರು ಒರೆಸಿಕೊಳ್ಳುತ್ತಲ್ಲೇ ಸಮರ್ಪಕ ವಿದ್ಯುತ್ ಪೂರೈಸುವ ಭರವಸೆ ನೀಡಿದರು.
"

ಬೆಂಡೆಬAಬಳಿ ಸೇರಿ ಸುತ್ತ-ಮುತ್ತಲಿನ ರೈತರಿಗೆ ವಿದ್ಯುತ್ ತೊಂದರೆಯಾಗಿದ್ದನ್ನು ಕೂಡಲೇ ನಿವಾರಿಸುವ ಭರವಸೆ ನೀಡಲಾಗಿದೆ. ನಿಯಮದಂತೆ ಏಳು ತಾಸು ಕರೆಂಟ್ ರೈತರಿಗೆ ನೀಡಲಾಗುವುದು ಮತ್ತು ಏನೇ ಸಮಸ್ಯೆ ಇದ್ದರೂ ಅದನ್ನೂ ಕೂಡಲೇ ಬಗೆಹರಿಸಲಾಗುದು.| ಮಾರ್ಕಂಡೇಶ್ವರ ಎಇಇ ಜೆಸ್ಕಾಂ ಯಾದಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net