ಸಂಕೇಶ್ವರದ ಎಸ್ಡಿವಿಎಸ್ ಸಂದ ಕಲಾ, ವಾಣಿಜ್ಯ ಮತ್ತು ವಿಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ಎ.ಬಿ.ಪಾಟೀಲ ಜನ್ಮದಿನದ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೀರೇಶ ಪಾಟೀಲ ಮಾತನಾಡಿದರು. ಆರ್.ಬಿ.ಪಾಟೀಲ, ಚಂದ್ರಶೇಖರ ಗುಡಸಿ, ಬಿ.ಎ.ಪೂಜಾರ, ಜಿ.ಸಿ.ಕೋಟಗಿ ಇತರರಿದ್ದರು.
ಜನಸೇವೆ ಧ್ಯೇಯವಾಗಿಸಿಕೊಂಡು ಶಿಣ, ಸಮಾಜಸೇವೆ ಹಾಗೂ ರಾಜಕೀಯ ೇತ್ರಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಪೂರ್ವ ಸೇವೆ ಸಲ್ಲಿಸಿರುವ ಮಾಜಿ ಸಚಿವ ಎ.ಬಿ.ಪಾಟೀಲ ಕಾರ್ಯ ಎಲ್ಲರಿಗೂ ಮಾದರಿ ಎಂದು ಸದಲಗಾ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಡಾ.ವೀರೇಶ ಪಾಟೀಲ ಹೇಳಿದರು.
ಪಟ್ಟಣದ ಎಸ್ಡಿವಿಎಸ್ ಸಂದ ಕಲಾ, ವಾಣಿಜ್ಯ ಮತ್ತು ವಿಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ಎ.ಬಿ.ಪಾಟೀಲ ಜನ್ಮದಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎ.ಬಿ.ಪಾಟೀಲ ಅವರ ಅನುಪಸ್ಥಿತಿಯಲ್ಲಿಯೂ ಸಂದ ವತಿಯಿಂದ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸುತ್ತಿರುವುದು ಸಂಸ್ಥೆಯ ಶಿಸ್ತು, ಸಂಟನಾ ಸಾಮರ್ಥ್ಯ ಹಾಗೂ ಅವರ ಮೇಲಿನ ಅಭಿಮಾನಕ್ಕೆ ಸಾಯಾಗಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಚಿಕ್ಕೋಡಿ ಜಿಲ್ಲಾಧ್ಯ ಚಂದ್ರಶೇಖರ ಗುಡಶಿ ಮಾತನಾಡಿ, ಪ್ರಭಾವಿ ನಾಯಕ ಎ.ಬಿ.ಪಾಟೀಲ ಶಾಸಕ, ಸಚಿವರಾಗಿ ಆರೋಗ್ಯ, ಶಿಣ, ಕೃಷಿ, ನೀರಾವರಿ, ಮೂಲಸೌಕರ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ. ಅವರ ಬದ್ಧತೆಯಿಂದ ಗಡಿಭಾಗದಲ್ಲಿ ಎಸ್ಡಿವಿಎಸ್ ಸಂ ರಾಜ್ಯಮಟ್ಟದಲ್ಲಿ ವಿಶಿಷ್ಟ ಗುರುತು ಪಡೆದಿದೆ ಎಂದರು.
ಎಸ್ಡಿವಿಎಸ್ ಸಂದ ನಿರ್ದೇಶಕ ಆರ್.ಬಿ.ಪಾಟೀಲ ಮಾತನಾಡಿ, 24 ಶಿಣ ಸಂಸ್ಥೆಗಳನ್ನೊಳಗೊಂಡಿರುವ ಬೃಹತ್ ಸಂಸ್ಥೆಯನ್ನು ಎ.ಬಿ.ಪಾಟೀಲ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ದೂರದೃಷ್ಟಿಯಿಂದ ಸಂ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದರು.
ಶಿಣ ಸಂಸ್ಥೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲಾಯಿತು. ಸಂಕೇಶ್ವರದ ಸಿಲ್ವರ್ ಡೇಲ್ ವೃದ್ಧಾಶ್ರಮದಲ್ಲಿ ವಿದ್ಯಾರ್ಥಿಗಳು, ಅಭಿಮಾನಿಗಳು ವೃದ್ಧರಿಗೆ ಫಲಾಹಾರ ವಿತರಣೆ ಮಾಡಿದರು.
ನಿರ್ದೇಶಕರಾದ ಸಂತೋಷ ಪಾಟೀಲ, ವಿ.ಬಿ.ತೋಡಕರ, ಡಾ.ನಂದಕುಮಾರ ಹಾವಳ, ಕೆ.ಸಿ.ಶಿರಕೋಳಿ, ಗಣೇಶ ಪಾಟೀಲ, ರಾಜು ಪಾಟೀಲ, ಸುಭಾಸ ಕಾಸರಕರ, ಸಂದ ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರಿ, ಕೆಎಲ್ಇ ಆಸ್ಪತ್ರೆ ವೈದ್ಯ
ಡಾ.ಶ್ರೀಕಾಂತ ರ್ವಿಗಿ, ಕಾರ್ಯದರ್ಶಿ ಜಿ.ಸಿ.ಕೋಟಗಿ, ಪ್ರಾಚಾರ್ಯರಾದ ಎಸ್.ಯು.ಯರಗಟ್ಟಿ, ಡಾ.ಎಸ್.ವೈ.ಮಡಿವಾಳಪ್ಪಗೋಳ, ನಿವೃತ್ತ ಪ್ರಾಚಾರ್ಯ ಪಿ.ಸಿ.ಮುನ್ನೋಳಿ ಇತರರಿದ್ದರು. ವಿದ್ಯಾರ್ಥಿನಿ ಐಶ್ವರ್ಯಾರಾಣಿ ರಿಜಕನವರ ಪುಷ್ಪಾರ್ಪಣೆ ಮಾಡಿದರು. ಉಪನ್ಯಾಸಕಿ ಸಂಧ್ಯಾರಾಣಿ ಮಠಪತಿ ನಿರೂಪಿಸಿದರು.
52 ಯೂನಿಟ್ ಬ್ಲಡ್ ಸಂಗ್ರಹ: ಬೆಳಗಾವಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಎ.ಬಿ.ಪಾಟೀಲ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ ಜರುಗಿತು. ಸಂದಡಿ ಮಹಾವಿದ್ಯಾಲಯಗಳ ಸಿಬ್ಬಂದಿ, ಎಸ್.ಎಸ್.ಆರ್ಟ್ಸ್ ಮತ್ತು ಟಿ.ಪಿ.ಸೈನ್ಸ್ ಮಹಾವಿದ್ಯಾಲಯದ ಎನ್ಎಸ್ಎಸ್, ಎನ್ಸಿಸಿ, ವೈಆರ್ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಟಕಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. 52 ಯೂನಿಟ್ಗೂ ಹೆಚ್ಚು ರಕ್ತ ಸಂಗ್ರಹಿಸಲಾಯಿತು.
ಸಸಿ ನೆಡಲು ಚಾಲನೆ: ಮಾಜಿ ಸಚಿವ ಎ.ಬಿ.ಪಾಟೀಲ ಜನ್ಮದಿನ ಪ್ರಯುಕ್ತ ಅಭಿಮಾನಿಗಳು, ವಿದ್ಯಾರ್ಥಿಗಳಿಂದ ರಚನಾತ್ಮಕ ಚಟುವಟಿಕೆಗಳು ಜರುಗಿದವು. ಸಮೀಪದ ಯಾದಗೂಡ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ 101 ಸಸಿ ನೆಡುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.