ನಗರದ ಆಂಜನಿ ಬಡಾವಣೆ ಯುವಕ ಅಮಲಿನಲ್ಲಿರುವುದನ್ನು ಕಂಡ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈತ ನಗರದಲ್ಲಿ ಅಪರಿಚಿತರಿಂದ 100 ರೂ. ನೀಡಿ ಗಾಂಜಾ ಪಡೆದು ಸೇವನೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.