ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆದಿನಾರಾಯಣ ಹೇಳಿಕೆ
ಮುಳಬಾಗಿಲು: ಡಿವಿಜಿ ಅವರು ಸಾರ್ಥಕತೆಯ ಬದುಕು ಕಟ್ಚಿಕೊಂಡವರು, ನುಡಿದಂತೆ ನಡೆದವರು. ಮಾನವೀಯ ಮೌಲ್ಯ ಹೊಂದಿದ್ದ ಸಾಹಿತಿ ತಿಮ್ಮಪ್ಪನ ಭಕ್ತರಾದ ಕಾರಣ ಮಂಕುತಿಮ್ಮನ ಕಗ್ಗ ಎಂಬ ಪುಸ್ತಕ ಬರೆದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆದಿನಾರಾಯಣ ಹೇಳಿದರು.human values
ನಗರದ ಕುಂಬಾರಪಾಳ್ಯದಲ್ಲಿರುವ ಡಿವಿಜಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಕಗ್ಗ ಎಂದರೆ ಪ್ರತಿಯೊಬ್ಬರೂ ಅವರವರ ವಿವೇಚನೆಗೆ ಅನುಗುಣವಾಗಿ ಸಾಹಿತ್ಯ ಬರವಣಿಗೆಯನ್ನು ಅರ್ಥ ವಾಡಿಕೊಳ್ಳುವ ವಿಧಾನಕ್ಕೆ ಕಗ್ಗ ಎಂಬ ಪದ ಅರ್ಥ ನೀಡುತ್ತದೆ ಎಂದು ವಿವರಿಸಿದರು.
ಕಾಂಗ್ರೆಸ್ ಮುಖಂಡ ಎಸ್.ವೈ.ಶಾಂಭಯ್ಯ ಮಾತನಾಡಿ, ಡಿ.ವಿ.ಗುಂಡಪ್ಪ ಮಂಕುತಿಮ್ಮನ ಕಗ್ಗದಲ್ಲಿ ಜೀವನದ ಪರಿಪೂರ್ಣ ಸಾರಾಂಶ ಅಡಗಿದೆ. ಪ್ರತಿಯೊಬ್ಬರೂ ಕಗ್ಗವನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ವಾಜಿ ಸದಸ್ಯ ಜಬೀವುಲ್ಲಾ ವಾತನಾಡಿ, ಸರ್ಕಾರಿ ಶಾಲೆ ಎಂದರೆ ಬರೀ ಬಡವರ ಮಕ್ಕಳು ವಿದ್ಯಾಭ್ಯಾಸ ವಾಡುತ್ತಾರೆ ಎಂಬ ಮನೋಭಾವ ಇದೆ. ಆದರೆ ಡಿವಿಜಿ ಶಾಲೆಯಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಉದ್ಯಮಿ, ಸರ್ಕಾರಿ ನೌಕರರ ಹಾಗೂ ಶ್ರೀಮಂತರ ಮಕ್ಕಳು ವ್ಯಾಸಂಗ ವಾಡುತ್ತಿದ್ದಾರೆ. ಇತ್ತೀಚೆಗೆ ಓಸಾಟ್ ಸಂಸ್ಥೆಯವರು ಮೂಲಸೌಲಭ್ಯ ಒಳಗೊಂಡ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.
ಶಾಲೆ ಆವರಣದ ಗುಂಡಪ್ಪ ಪ್ರತಿಮೆಗೆ ಬಣ್ಣದ ಗುಲಾಬಿ ಹೂವುಗಳಿಂದ ಅಲಂಕಾರ ವಾಡಲಾಗಿತ್ತು, ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕ್ಪ್ರತಿಕ ಕಾರ್ಯಕ್ರಮಗಳು ನಡೆದವು. ಗುಂಡಪ್ಪ ಶಾಲೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿರುವ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಡಿವಿಜಿ ಶಾಲೆಮುಖ್ಯಶಿಕ್ಷಕ ಸಿ.ಸೊಣ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಅಧ್ಯಕ್ಷ ಎಚ್.ವೆಂಕಟಗಿರಿಯಪ್ಪ, ಕಾರ್ಯದರ್ಶಿ ಎಚ್.ಭಾಸ್ಕರ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಖಜಾಂಚಿ ಸುಬ್ರಹ್ಮಣ್ಯಂ ಇದ್ದರು.