ಜೀವನದ ಒಂದು ದರ್ಶನ ಹಿಂದೂ

A vision of life Hindu
A vision of life Hindu
Published on
ಕೊರಟಗೆರೆ: ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ. ಅದು ಜೀವನದ ಒಂದು ದರ್ಶನ, ಬದುಕುವ ಸಂಸತಿ. ಮಾನವೀಯತೆ, ಸಹಜತೆ, ಸಹಬಾಳ್ವೆ, ಧರ್ಮಪಾಲನೆ ಈ ಎಲ್ಲವೂ ಹಿಂದೂ ಜೀವನ ಪದ್ಧತಿಯ ಮೂಲ ಮೌಲ್ಯಗಳು ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದ ಭವ್ಯ ಮೆರವಣಿಗೆ ಉದ್ಘಾಟಿಸಿ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವೇ ನಮ್ಮನ್ನು ರಕ್ಷಿಸುತ್ತದೆ ಎಂಬ ಸನಾತನ ಸತ್ಯವನ್ನು ಹಿಂದೂ ಧರ್ಮ ಸಾರುತ್ತದೆ. ಜಾತಿ&ಪಂಥಗಳ ಭೇದ ಮರೆತು, ಹಿಂದುಗಳೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮರಕ್ಷಣೆಗಾಗಿ ಪಣತೊಟ್ಟು ನಿಲ್ಲಬೇಕು ಎಂದರು.
ತುಮಕೂರು ಹಿರಿಯ ಪ್ರಾಧ್ಯಾಪಕ ಕೊಟ್ರೇಶ್​ ಮಾತನಾಡಿ, ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ಮಾನವ ಬದುಕಿಗೆ ದಿಕ್ಕು ತೋರಿದ ಮಹಾಸಂಸತಿ. ಸಹಿಷ್ಣುತೆ, ಸಮನ್ವಯ, ಸರ್ವಧರ್ಮ ಸಮಭಾವನೆ ಇವು ಹಿಂದೂ ಧರ್ಮದ ಆತ್ಮ. ಯುವ ಪೀಳಿಗೆ ನಮ್ಮ ಸಂಸತಿ, ಪರಂಪರೆ, ಧರ್ಮದ ತತ್ತ್ವಗಳನ್ನು ಅರಿತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ ಸದೃಢವಾಗುತ್ತದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್​, ಮಾಜಿ ಅಧ್ಯಕ್ಷ ಎಸ್​.ಪವನ್​ ಕುಮಾರ್​, ದರ್ಶನ್​, ಕನ್ನಿಕಾ ವಿದ್ಯಾಪಿಠದ ಅಧ್ಯಕ್ಷ ಎಸ್​.ಸುಧೀರ್​, ವಾಸವಿ ಮಾತೃ ಮಂಡಳಿಯ ಅಧ್ಯಕ್ಷೆ ಸುಧಾಮಣಿ, ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿಯ ಕಾರ್ಯದರ್ಶಿ ಜಗದೀಶ್​, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಜಿಲ್ಲಾ ಅಧ್ಯಕ್ಷ ಮಮತಾ ದಿವಾಕರ್​, ಪಪಂ ಸದಸ್ಯ ಪ್ರದಿಪ್​ ಕುಮಾರ್​ ಮತ್ತಿತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net