ಮನಸ್ಸಿಗೆ ಮುದ ನೀಡುವ ಟ್ರೀ ಪಾರ್ಕ್

ಗುರುಮಠಕಲ್ ತಾಲೂಕಿನ ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ ೨ ಕೋಟಿ ವೆಚ್ಚದ ಬನದೇಶ್ವರ ಪ್ರಾಣವಾಯು ವೃಕ್ಷೆÆÃದ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು. ಡಿಸಿಎ-ï‌ಒ ಚೇತನ್ ಗಸ್ತಿ, ಎಸಿಎ-ï‌ಒ ಮಹ್ಮದ್ ಅಸದ್, ಆರ್‌ಎ-ï‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಇತರರಿದ್ದರು.
ಗುರುಮಠಕಲ್ ತಾಲೂಕಿನ ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ ೨ ಕೋಟಿ ವೆಚ್ಚದ ಬನದೇಶ್ವರ ಪ್ರಾಣವಾಯು ವೃಕ್ಷೆÆÃದ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು. ಡಿಸಿಎ-ï‌ಒ ಚೇತನ್ ಗಸ್ತಿ, ಎಸಿಎ-ï‌ಒ ಮಹ್ಮದ್ ಅಸದ್, ಆರ್‌ಎ-ï‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಮೆಚ್ಚುಗೆ
  • ಬನದೇಶ್ವರ ವೃಕ್ಷೋದ್ಯಾನ ನಿರ್ಮಾಣಕ್ಕೆ ಚಾಲನೆ

ನಗರೀಕರಣದಿಂದಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಜನಸಾಮಾನ್ಯರ ಉಸಿರಾಟಕ್ಕೆ ಉತ್ತಮ ಗಾಳಿ ಅಗತ್ಯವಿರುವುದನ್ನು ಮನಗಂಡು ಅರಣ್ಯ ಇಲಾಖೆಯಿಂದ ೨ ಕೋಟಿ ಅನುದಾನದಲ್ಲಿ ಟ್ರೀ ಪಾರ್ಕ್ ನಿರ್ಮಿಲಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಕೈಗೆತ್ತಿಕೊಂಡಿರುವ ಬನದೇಶ್ವರ ಪ್ರಾಣವಾಯು ವೃಕ್ಷೆÆÃದ್ಯಾನ (ಟ್ರೀ ಪಾರ್ಕ್) ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇದೀಗ ೫೦ ಲಕ್ಷ ಅನುದಾನ ಬಂದಿದ್ದು, ಕೆಲಸ ಚುರುಕಿನಿಂದ ನಡೆಯಲಿದೆ ಎಂದರು.
ಈಶ್ವರ ಖಂಡ್ರೆ ಅರಣ್ಯ ಸಚಿವರಾಗಿದ್ದಾಗ ಪ್ರತಿ ಕ್ಷೇತ್ರದಲ್ಲಿ ಅರಣ್ಯ ಹಸಿರೀಕರಣ ಉದ್ದೇಶದಿಂದ ರಾಜ್ಯಾದ್ಯಂತ ಟ್ರೀ ಪಾರ್ಕ್ ಯೋಜನೆ ಜÁರಿಗೆ ತಂದಿದ್ದಾರೆ. ಅತಿ ಕಡಿಮೆ ಶೇ.೫ ಅರಣ್ಯ ಹೊಂದಿದ ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಜತೆ ಅರಣ್ಯ ಬೆಳೆಸಲು ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪರಿಸರ ಸಮತೋಲನಕ್ಕಾಗಿ ಗಿಡ-ಮರಗಳನ್ನು ಹೆಚ್ಚೆಚ್ಚು ಬೆಳೆಯಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎ-ï‌ಒ ಚೇತನ್ ಗಸ್ತಿ ಮಾತನಾಡಿ, ಐದು ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ಟ್ರೀ ಪಾರ್ಕ್ನಲ್ಲಿ ಆಮ್ಲಜನಕ ಹೊರಸೂಸೂವ ಸಸಿಗಳನ್ನು ನೆಡುವುದರ ಜತೆ ಮಕ್ಕಳ ಆಟಿಕೆ, ಜಿಮ್, ಶುದ್ಧ ಕುಡಿಯುವ ಘಟಕ, ಪ್ರತ್ಯೇಕ ಶೌಚಗೃಹ ಇರಲಿದೆ. ಪಾರ್ಕ್ ಎದುರು ಸುಂದರವಾದ ಆರ್ಚ್(ದ್ವಾರ ಬಾಗಿಲು) ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಎಸಿಎ-ï‌ಒ ಮಹ್ಮದ್ ಅಸದ್, ಆರ್‌ಎ-ï‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಅಜಯರಡ್ಡಿ ಎಲ್ಹೇರಿ, ಮಲ್ಲಣಗೌಡ ಕೌಳೂರು, ಶರಣಪ್ಪಗೌಡ ಹೊಸಳ್ಳಿ, ಪರ್ವತರಡ್ಡಿ, ಬಸವರಾಜ ಕಣೇಕಲ್, ಪೋಲಪ್ಪ ನೀಲಹಳ್ಳಿ, ಬೆಂಜಮನ್, ರಾಜೇಶ ಉಪ್ಪಿನ್, ಮಹಿಪಾಲರಡ್ಡಿ ಮಲ್ಹಾರ, ರಾಜು ಕಾಳಬೆಳಗುಂದಿ, ನರಸಿಂಹರಡ್ಡಿ ಚಿಂತಗುAಟಾ, ರಾಜೇಶ ಉಡುಪಿ, ಅಲ್ಲಾವುದ್ದೀನ್, ಚೌಡಯ್ಯ, ಶರಣಗೌಡ ಮಾಧ್ವಾರ ಇತರರಿದ್ದರು.
"

ಟ್ರೀ ಪಾರ್ಕ್ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ಸುರಕ್ಷತೆಯೂ ಮುಖ್ಯವಾಗಿದೆ. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಒಬ್ಬ ಗಾರ್ಡ್ ನಿಯೋಜಿಸಿ ಸೂಕ್ತ ನಿರ್ವಹಣೆ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು.| ಶರಣಗೌಡ ಕಂದಕೂರಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net