ಇತ್ತೀಚಿಗೆ ಆಧುನಿಕ ತಂತ್ರಜ್ಞಾನದಲ್ಲಿ ನಾಟಕಗಳು ಜೀವಂತವಾಗಿ ಉಳಿದಿವೆ. ನಾಟಕಗಳು ಸಮಾಜದ ಕನ್ನಡಿಯಿದ್ದಂತೆ, ಸಮಾಜಕ್ಕಿರುವ ಅವಶ್ಯಕತೆಗಳು, ಬದಲಾವಣೆಗಳು ನಾಟಕಗಳು ಮಾಡುತ್ತಿವೆ. ಅದರಲ್ಲೂ ಪೌರಾಣಿಕ, ಸಾಮಾಜಿಕ ನಾಟಕಗಳು ಯಕ್ಷಗಾನದಂತ ನೃತರೂಪಕಗಳು ಮಹತ್ವದ ಸಂದೇಶ ನೀಡುತ್ತಿವೆ. ಮೇರುನಟ ಮಾಸ್ಟರ್ ಹೀರಣಯ್ಯ, ಡಾ. ರಾಜ್ಕುಮಾರ್ ಅವರಂತಹ ಪ್ರಸಿದ್ಧ ನಟರು ರಂಗಭೂಮಿಯಿಂದಲೇ ಬಂದವರಾಗಿದ್ದಾರೆ. ಇಂತಹ ರಂಗಕಲೆ ಶತಮಾನಗಳ ಕಾಲ ಜೀವಂತವಾಗಿರಲೆಂದು ಹಾರೈಸಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಪ್ರಾಧ್ಯಾಪಕಿ ನಿವೇದಿತಾ ಮಾತನಾಡಿ, ಇದುವರೆಗೂ 40ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದೇನೆ. ರಂಗಕಲೆಯ ಬಗ್ಗೆ ಆಸಕ್ತಿ ಇದ್ದಲ್ಲಿ ಜ್ಞಾನ ಬೆಳೆಸಿಕೊಳ್ಳಬಹುದಾಗಿದೆ. ಪೌರಾಣಿಕ ನಾಟಕಗಳಿಂದ ಪುರಾಣಗಳನ್ನು ತಿಳಿಯಬಹುದಾಗಿದೆ. ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.