ಶಾಲೆಯಲ್ಲಿ ಕಳೆಗಟ್ಟಿದ ವಾತಾವರಣ school

ಶಾಲೆಯಲ್ಲಿ ಕಳೆಗಟ್ಟಿದ ವಾತಾವರಣ school
ಶಾಲೆಯಲ್ಲಿ ಕಳೆಗಟ್ಟಿದ ವಾತಾವರಣ school
Published on
ಬಂಗಾರಪೇಟೆ: ನಗರ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದ ಅಂಗವಾಗಿ ಸೋಮವಾರ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೇಸಿಗೆ ರಜೆಯ ನಂತರ ಮತ್ತೆ ಶಾಲೆಗಳಿಗೆ ಮರಳಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. school
ಶಾಲೆಯ ಪ್ರವೇಶ ದ್ವಾರದಲ್ಲಿ ಮಾವಿನ ಎಲೆಯ ಹಸಿರು ತೋರಣ ಕಟ್ಟಿ, ಎರಡೂ ಬದಿ ಬಾಳೆ ಕಂಬ ನೆಟ್ಟು ಸಾಂಪ್ರದಾಯಿಕವಾಗಿ ಸಿಂಗಾರಗೊಳಿಸಲಾಗಿತ್ತು. ಶಾಲೆಯ ಆವರಣ ಹಬ್ಬದ ವಾತಾವರಣವನ್ನು ಮೂಡಿಸುವಂತೆ ಕಂಗೊಳಿಸುತ್ತಿತ್ತು. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು.
ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿ ಪುಸ್ತಕಗಳು ಹಾಗೂ ಶಾಲಾ ಸಾಮಗ್ರಿಹೊತ್ತು ಶಾಲೆಗೆ ಆಗಮಿಸಿದರು. ಹಲವು ದಿನದ ಬಳಿಕ ತಮ್ಮ ಸ್ನೇಹಿತರನ್ನು ಭೇಟಿಯಾದ ವಿದ್ಯಾರ್ಥಿಗಳು ಪರಸ್ಪರ ಸಂತಸ ಹಂಚಿಕೊಂಡು ಖುಷಿಖುಷಿಯಾಗಿ ಶಾಲೆಯೊಳಗೆ ಪ್ರವೇಶಿಸಿದರು.
ಶಿಕ್ಷಕರು ಶಾಲೆಯ ಮುಖ್ಯದ್ವಾರದಲ್ಲೇ ನಿಂತು ವಿದ್ಯಾರ್ಥಿಗಳಿಗೆ ಚಾಕೊಲೇಟ್​ ಹಾಗೂ ಹೂವು ನೀಡಿ ಬರಮಾಡಿಕೊಂಡರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ನಿಯಮಿತ ಹಾಜರಾತಿ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಯ ಕುರಿತು ಶಿಕ್ಷಕರು ಮಾರ್ಗದರ್ಶನ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net