ಸಂಗೀತಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ವಾದ್ಯಗಳ ನಿನಾದ

ರುದ್ರಪಟ್ಟಣದಲ್ಲಿ ಆಯೋಜಿಸಿದ್ದ 23ನೇ ವಾರ್ಷಿಕ ಸಂಗೀತೋತ್ಸವದಲ್ಲಿ ವಿದ್ವಾನ್ ಎ.ಎಸ್.ಮುರುಳಿ ಅವರ ಗಾಯನ ಕಛೇರಿ ಗಮನ ಸೆಳೆಯಿತು. ವಿದ್ವಾನ್ ಚಾರುಲತಾ ರಾಮಾನುಜಂ ಅವರ ಪಿಟೀಲು, ವಿದ್ವಾನ್ ಆನೂರ್ ಅನಂತಕೃಷ್ಣಶರ್ಮ ಅವರ ಮೃದಂಗ, ವಿದ್ವಾನ್ ಬಿ.ಎಸ್.ಪುರುಷೋತ್ತಮ್ ಅವರು ಖಂಜಿರ ನುಡಿಸಿ ಸಾಥ್ ನೀಡಿದರು.

Published on

ಪ್ರಮುಖ ಮುಖ್ಯಾಂಶಗಳು

  • ರುದ್ರಪಟ್ಟಣ
  • 23ನೇ ವಾರ್ಷಿಕ ಸಂಗೀತೋತ್ಸವ
ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ 23ನೇ ವಾರ್ಷಿಕ ಸಂಗೀತೋತ್ಸವದಲ್ಲಿ ಮನಮೋಹಕ ಗಾಯನ ಮತ್ತು ಮನಸೆಳೆಯುವ ವಾದ್ಯಗಳ ನಿನಾದ ಸಂಗೀತಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿತು.
ವಿದ್ವಾನ್ ಎ.ಎಸ್.ಮುರಳಿ ಅವರ ಗಾಯನ ಕಛೇರಿ ಶ್ರೋತೃಗಳನ್ನು ರಂಜಿಸಿತು. ವಿದ್ವಾನ್ ಚಾರುಲತಾ ರಾಮಾನುಜಂ ಅವರ ಪಿಟೀಲು, ವಿದ್ವಾನ್ ಆನೂರ್ ಅನಂತಕೃಷ್ಣಶರ್ಮ ಅವರ ಮೃದಂಗ, ವಿದ್ವಾನ್ ಬಿ.ಎಸ್. ಪುರುಷೋತ್ತಮ್ ಅವರ ಖಂಜಿರ ವಾದನದ ನಿನಾದ ಸಂಗೀತೋತ್ಸವದ ಮೆರುಗು ಹೆಚ್ಚಿಸಿತು.
ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಸುರೇಶ್ ಅವರೊಂದಿಗೆ ನಡೆಸಿದ ಹೃದಯ ಹೃದಯವಂತಿಕೆ ಸಂದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಎಚ್.ಡಿ. ಡುಂಡಿರಾಜ್ ಮತ್ತು ವೈ.ವಿ.ಗುಂಡೂರಾವ್ ಅವರ ಹಾಸ್ಯ ಸಿಂಚನ ಶ್ರೋತೃಗಳನ್ನು ನಗೆಗಡಲಲ್ಲಿ ತೇಲಿಸಿತು. ಎಲ್ಲ ಕಲಾವಿದರನ್ನು ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಸನ್ಮಾನಿಸಿ ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net