ವಿಚಿತ್ರ ದುರಭ್ಯಾಸದ ಚೈಲ್ಡ್ ಕಿಡ್ನಾಪರ್

ಅಬ್ದುಲ್ ಕರೀಂ
ಅಬ್ದುಲ್ ಕರೀಂ
Published on
ಧಾರವಾಡ: ನಗರದ ಕಮಲಾಪುರ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಇ¨್ಬರು ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ, ಅಪರಿಚಿತ ವ್ಯಕ್ತಿ ಮಕ್ಕಳನ್ನು ಅಪಹರಿಸಿದ್ದೇಕೆ? ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರು ಏಕೆ ಗಮನ ಹರಿಸಲಿಲ್ಲ? ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೊರಟಿದ್ದ ಎಂಬ ಅನುಮಾನಗಳು ಮುನ್ನೆಲೆಗೆ ಬಂದಿವೆ.
ಸೋಮವಾರ ಮಧ್ಯಾಹ್ನ ಶಾಲೆಯ ಊಟದ ಬಿಡುವಿನ ವೇಳೆ ಆರೋಪಿ ಅಬ್ದುಲ್ ಕರೀಂ ಮೇಸ್ತಿç ಶಾಲೆ ಬಳಿ ಹೋಗಿ. ಹಲವು ಮಕ್ಕಳಿಗೆ ಆಮಿಷಮೊಡ್ಡಿದ್ದನಂತೆ. ಕೊನೆಗೆ 3ನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮೀ ಕರಿಯಪ್ಪನವರ ಹಾಗೂ ತನ್ನೀರ್ ದೊಡಮನಿ ಅವರನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ.
ಟಿಎಂಎಸ್ ಕ್ಯಾಮರಾ ಸುಳಿವು:
ಅಪಹರಣದ ವಿಷಯ ತಿಳಿದೊಡನೆ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ತಂಡ ಶಾಲೆಯ ಹತ್ತಿರದ ಮನೆಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಅಬ್ದುಲ್ ಕರೀಂ ಮೇಸ್ತಿ ಮಕ್ಕಳಿಬ್ಬರನ್ನು ಬೈಕ್‌ನಲ್ಲಿ ಕೂಡಿಸಿಕೊಂಡು ಹೋಗುವುದು ಪತ್ತೆಯಾಗಿದೆ. ನಂತರ ವಿವಿಧೆಡೆ ಅಳವಡಿಸಿರುವ ಟಿಎಂಎಸ್ ಕ್ಯಾಮರಾಗಳ ಮೊರೆ ಹೋಗಿ ಪರಿಶೀಲಿಸಿದ್ದಾರೆ. ಆರೋಪಿ ಜಯನಗರ, ಶ್ರೀನಗರ ಮಾರ್ಗವಾಗಿ ಹಳಿಯಾಳದತ್ತ ಹೋಗುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದೆ. ಮಕ್ಕಳು ಅಪಹರಣ ಆಗಿರುವುದು ಖಾತ್ರಿಯಾಗುತ್ತಿದ್ದಂತೆ ಹಳಿಯಾಳ, ದಾಂಡೇಲಿ, ಜೋಯಿಡಾ ಪೊಲೀಸರಿಗೆ ಮಾಹಿತಿ ನೀಡಿ ನಾಕಾಬಂದಿ ಹಾಕಲಾಗಿತ್ತು.
ಉಳವಿ ಕಡೆ ಹೋಗಲು ಯೋಜಿಸಿದ್ದ ಅಬ್ದುಲ್ ಕರೀಂ ದಾರಿಯಲ್ಲಿ ಮದ್ಯ ಸೇವಿಸಿದ್ದ. ಜೋಯಿಡಾ ಬಳಿ ನಿಯಂತ್ರಣ ತಪ್ಪಿ ಬೈಕ್ ಅಪಘಾತ ಸಂಭವಿಸಿತ್ತು. ಈ ವೇಳೆ ಅಬ್ದುಲ್ ಕರೀಂನ ಹಾಗೂ ತಲೆಗೆ ಪೆಟ್ಟಾಗಿತ್ತು. ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ತಲೆಗೆ ಪೆಟ್ಟಾಗಿದ್ದರಿಂದ ಆರೋಪಿಯನ್ನು ಹು¨್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿಕ್ಷಕರ ನಿಷ್ಕಾಳಜಿಗೆ ಕಿಡಿ:
ಊಟದ ಬಿಡುವಿನ ನಂತರ ಮಕ್ಕಳು ಶಾಲೆಗೆ ಮರಳಿದ್ದರು. ಆದರೆ, ಲಕ್ಷ್ಮೀ ಹಾಗೂ ತನ್ವೀರ್ ಮರಳಿರಲಿಲ್ಲ. ಮಕ್ಕಳು ಬಾರದಿದ್ದರೂ ಅವರ ಬ್ಯಾಗ್‌ಗಳು ವರ್ಗ ಕೋಣೆಯಲ್ಲೇ ಇದ್ದವು. ಆದರೂ ಶಿಕ್ಷಕರು ಗಮನ ಹರಿಸದೆ ನಿರ್ಲಕ್ಷ÷್ಯ ತೋರಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬಾರದಿದ್ದಾಗ ಪಾಲಕರು ಶಾಲೆ ಬಳಿ ಹೋಗಿದ್ದಾರೆ. ಶಾಲೆಗೆ ಅವರಣ ಗೋಡೆಯೇ ಇಲ್ಲದಿರುವುದು ಮಕ್ಕಳ ಅಪಹರಣಕ್ಕೆ ದಾರಿ ಮಾಡಿಕೊಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net