ಭಯೋತ್ಪಾದಕರಿಗೆ ದೇಶದಿಂದ ಖಡಕ್​ ಸಂದೇಶ terrorists

ಭಯೋತ್ಪಾದಕರಿಗೆ ದೇಶದಿಂದ ಖಡಕ್​ ಸಂದೇಶ terrorists
ಭಯೋತ್ಪಾದಕರಿಗೆ ದೇಶದಿಂದ ಖಡಕ್​ ಸಂದೇಶ terrorists
Published on
ಮುಳಬಾಗಿಲು: ದೇಶದ ಮುಕುಟ ಪ್ರಾಯ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಆಗಾಗ ನಡೆಯುತ್ತಲೇ ಇರುತ್ತವೆ. 2019 ಫೆ.14ರಂದು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು ಅವರ ಬಲಿದಾನಕ್ಕೆ ತಕ್ಕ ಪ್ರತಿಕಾರವನ್ನು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಪಡೆಗಳು ಭಯೋತ್ಪಾದನೆ ವಿರುದ್ಧ ಸಮರ ಸಾರುವ ಮೂಲಕ ಖಡಕ್​ ಸಂದೇಶ ಸಾರಲಾಗಿದೆ ಎಂದು ಆಲಂಗೂರು ವೈ.ಸುರೇಂದ್ರ ಗೌಡ ಹೇಳಿದರು.terrorists
ನಗರದ ಟಿಎಪಿಸಿಎಂಎಸ್​ ಮುಂಭಾಗದ ಹನುಮಾನ್​ ವೃತ್ತದಲ್ಲಿ ಪ್ಯಾರಾ ಮಿಲಿಟರಿ ನಿವೃತ್ತ ಸೈನಿಕರ ಸೇವಾ ಟ್ರಸ್ಟ್​ನಿಂದ ಶನಿವಾರ ಏರ್ಪಡಿಸಿದ್ದ ಬ್ಲಾಕ್​ ಡೇ ದಿನಾಚರಣೆಯಲ್ಲಿ ಮಾತನಾಡಿ, 7 ವರ್ಷಗಳ ಹಿಂದೆ ದೇಶಕ್ಕಾಗಿ ಹುತಾತ್ಮರಾದ ವೀರ ಸೈನಿಕರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಇದ್ದಾರೆ ಎಂದು ಹೇಳಿದರು.
ಬಿಜೆಪಿ ಒಬಿಸಿ ಮುಖಂಡ ನಂಗಲಿ ಕೆ.ಸತೀಶ್​ ಕುಮಾರ್​ ಮಾತನಾಡಿ, ಇಂದು ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ದೇಶ ನಿಷ್ಠ ಭಾರತೀಯನಿಗೆ ಈ ದಿನ ಕರಾಳ ದಿನವಾಗಿದೆ. ವೀರ ಪುತ್ರರ ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು.
ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ ಮಾತನಾಡಿ, ಭಯೋತ್ಪಾದನೆ ವಿರುದ್ಧ ಭಾರತ ದಿಟ್ಟ ಉತ್ತರ ನೀಡುವ ಮೂಲಕ ದೇಶದ ಭದ್ರತೆಗೆ ಭದ್ರ ಭೂನಾದಿ ಹಾಕಿ ಕೊಟ್ಟಿದೆ ಎಂದರು.
ಕಾರ್ಯದರ್ಶಿ ರವಿಕುಮಾರ್​, ನಿವೃತ್ತ ಸೈನಿಕರಾದ ರೆಹಮತ್ತುಲ್ಲಾ, ಜಗದೀಶ್​, ಚಂದ್ರಶೇಖರ್​, ಶ್ರೀನಿವಾಸ್​, ಲಕ್ಷ$್ಮಯ್ಯ, ಜಿ.ಕೆ.ಮೂರ್ತಿ, ವೆಂಕಟರಾಮಪ್ಪ, ಶ್ರೀರಾಮ್​, ಭಾಗ್ಯಾ, ಮುಖಂಡರಾದ ಜಿ.ಶಂಕರಪ್ಪ, ತಾಯಲೂರು ಗೋಪಿನಾಥ್​, ಮಿಟ್ಟೂರು ಶಂಕರಪ್ಪ, ಟೈಲರ್​ ಶಂಕರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net