ಸಮಾಜಮುಖಿ ವ್ಯಕ್ತಿ ಸದಾ ಹಸನ್ಮುಖಿ

ಮಹಾಲಿಂಗಪುರದ  ಸಿ.ಎಂ.ಹುರಕಡ್ಲಿ  ೌಂಡೇಶನ್‌ನ ವತಿಯಿಂದ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಶೈಲ ಹಿಪ್ಪರಗಿ, ಬಲವಂತಗೌಡ ಪಾಟೀಲ, ಶ್ರೀಶೈಲಪ್ಪ ಉಳ್ಳಾಗಡ್ಡಿ ಇತರರಿದ್ದರು.
ಮಹಾಲಿಂಗಪುರದ ಸಿ.ಎಂ.ಹುರಕಡ್ಲಿ ೌಂಡೇಶನ್‌ನ ವತಿಯಿಂದ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀಶೈಲ ಹಿಪ್ಪರಗಿ, ಬಲವಂತಗೌಡ ಪಾಟೀಲ, ಶ್ರೀಶೈಲಪ್ಪ ಉಳ್ಳಾಗಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಂತೇಶ ಹಿಟ್ಟಿನಮಠ ಹೇಳಿಕೆ
  • ಉಚಿತ ತರಬೇತಿ ಶಿಬಿರ
ಮಹಾಲಿಂಗಪುರ: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ನಿಜವಾದ ಸಂತಪ್ತಿ ಹಾಗೂ ಸುಖವನ್ನು ಅನುಭವಿಸುತ್ತಾರೆ ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.
ನಗರದ ಬಸವನಗರ ದಲ್ಲಿರುವ ಬಸವೇಶ್ವರ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ಫೌಂಡೇಶನ್ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ವ-ಉದ್ಯೋಗ ತರಬೇತಿ ಹಾಗೂ ಉಚಿತ ಕಲರ್ ಥೆರಪಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸೇವೆ ದೇವರ ಸೇವೆಗೆ ಸಮನಾಗಿದ್ದು, ಫೌಂಡೇಶನ್ನ ಉಚಿತ ತರಬೇತಿಯಿಂದ ಅನೇಕ ಮಹಿಳೆಯರು ಸ್ವಾವಲಂಬಿ ಜೀವನದತ್ತ ಹೆಜ್ಜೆಯಿಟ್ಟಿದ್ದಾರೆ ಎಂದು ಹೇಳಿದರು.
ಅಕ್ಕಾತಾಯಿ ಕಿಚಡಿ ಮಾತನಾಡಿ, ಮಹಿಳೆಯರಿಗೆ ಹೊಲಿಗೆ, ಬ್ಯೂಟಿಷಿಯನ್, ಮೆಹಂದಿ ಹಾಗೂ ಆರಿ ವರ್ಕ್ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಕುಟುಂಬದಲ್ಲಿ ಪಾಲಕರ ನಡೆ-ನುಡಿಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನೂ ಅವರು ಒತ್ತಿ ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ತರಬೇತಿಗೆ ಆಗಮಿಸಿದ ಮಹಿಳೆಯರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಕಲರ್ ಥೆರಪಿ ಸೌಲಭ್ಯವನ್ನು ಪಡೆದರು.
ಬಲವಂತಗೌಡ ಪಾಟೀಲ, ಶ್ರೀಶೈಲ ಹಿಪ್ಪರಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಅರ್ಜುನ ದೊಡಮನಿ ಸೇರಿ ಹಲವರು ಭಾಗವಹಿಸಿದ್ದರು.
ಬಸವರಾಜ ಮೇಟಿ ನಿರೂಪಿಸಿದರು, ಚನಬಸು ಹುರಕಡ್ಲಿ ಸ್ವಾಗತಿಸಿದರು, ಶಿವಾನಂದ ನೆಗಿನಾಳ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net