ಖತಲ್ ರಾತ್ರಿ ವೇಳೆ ಯುವಕರ ನಡುವೆ ಗಲಾಟೆ

ಶಹಾಪುರದಲ್ಲಿ ಮೊಹರಂ ಖತಲ್ ರಾತ್ರಿ ಆಚರಣೆ ಸಂದರ್ಭದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿರುವ ದೃಶ್ಯ.
ಶಹಾಪುರದಲ್ಲಿ ಮೊಹರಂ ಖತಲ್ ರಾತ್ರಿ ಆಚರಣೆ ಸಂದರ್ಭದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿರುವ ದೃಶ್ಯ.
Published on
ಮುನಿರಾಬಾದ್: ಮೊಹರಂ ಖತಲ್ ರಾತ್ರಿ ಆಚರಣೆ ಸಂದರ್ಭದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಗುರುವಾರ ರಾತ್ರಿ ಮೊಹರಂ ಹಿನ್ನೆಲೆಯಲ್ಲಿ ಶಹಾಪುರ ಗ್ರಾಮಕ್ಕೆ ಹೊರಗಿನಿಂದ ಕೆಲವು ಅಪರಿಚಿತ ಯುವಕರು ಬಂದಿದ್ದರು. ಈ ಕಾರಣಕ್ಕೆ ಸ್ಥಳೀಯರು ಹಾಗೂ ಹೊರಗಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ವಿಕೋಪಕ್ಕೆ ತಿರುಗಿದೆ. 15ರಿಂದ 20 ಯುವಕರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  
ಹೊರಗಿನಿಂದ ಬಂದಿದ್ದ ಅಪರಿಚಿತ ಯುವಕರು ನಮ್ಮ ಗ್ರಾಮದ ಯುವಕರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಶಾಂತಿ ಕದಡಿದ್ದಾರೆ. ಅವರನ್ನು ತಕ್ಷಣ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಹಾಪುರ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಗ್ರಾಮದ ಮುಖಂಡರು ನೀಡಿದ ಲಿಖಿತ ದೂರಿನ ಅನ್ವಯ ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಲಾಟೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net