ಸವಾಜ ಜಾಗೃತಗೊಳಿಸಿದ ಸಂತಕವಿ

A sad poem that awakened the public.
A sad poem that awakened the public.
Published on
ಕೊರಟಗೆರೆ : ತ್ರಿಪದಿಗಳ ಮೂಲಕ ಸತ್ಯ, ಧರ್ಮ, ನೈತಿಕತೆ ಮತ್ತು ವಾನವೀಯ ಮೌಲ್ಯಗಳ ಬೋಧನೆ ವಾಡಿ ಸವಾಜವನ್ನು ಜಾಗೃತಗೊಳಿಸಿದ ಮಹಾನ್ ಸಂತಕವಿ ಸರ್ವಜ್ಞ ಅವರ ಜೀವನವೇ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.
ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿಯಲ್ಲಿ ವಾತನಾಡಿದ ಅವರು, 16ನೇ ಶತವಾನದಲ್ಲಿ ಸಾವಾನ್ಯ ಜನರ ಆಡುಭಾಷೆಯಲ್ಲಿಯೇ ಆಳವಾದ ಜೀವನ ತತ್ವಗಳನ್ನು ಸಾರಿದ ಅಪರೂಪದ ಕವಿ ಸರ್ವಜ್ಞರು ಎಂದು ಸ್ಮರಿಸಿದರು.
ಜಾತಿ ವ್ಯವಸ್ಥೆ, ಮೇಲುಕೀಳು ಭೇದಭಾವ, ಜ್ಞಾನ-ಅಜ್ಞಾನ, ಸತ್ಯ-ಮಿಥ್ಯ, ಹುಟ್ಟು-ಸಾವುಗಳ ತತ್ವಗಳನ್ನು ಸುಲಭವಾಗಿ ಅರ್ಥವಾಗುವ ತ್ರಿಪದಿಗಳ ಮೂಲಕ ಜನಮನಗಳಲ್ಲಿ ಬಿತ್ತಿದ ಅವರು ನಿಜವಾದ ಸವಾಜ ಸುಧಾರಕರಾಗಿದ್ದರು ಎಂದರು.
ತಾಲೂಕು ಕುಂಬಾರ ಸಂದ ಎಸ್. ಹನುಮಂತ ವಾತನಾಡಿ, ಸರ್ವಜ್ಞರು ಜನಸಾವಾನ್ಯರ ಮನಸ್ಸಿನ ವಾತನ್ನು ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿದ ಅಪೂರ್ವ ಕವಿ. ಅವರ ತ್ರಿಪದಿಗಳು ಇಂದಿಗೂ ಗ್ರಾಮೀಣ ಜೀವನದಲ್ಲಿ ನುಡಿಗಟ್ಟಾಗಿ ಬಳಕೆಯಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net