_1782571385102.webp?w=480&auto=format%2Ccompress&fit=max)
_1782571385102.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮೋಟಾರ್‌ಸೈಕ್ಲಿಂಗ್ಎಂದರೆ ಕೇವಲ ಒಂದು ಪ್ರಯಾಣವಲ್ಲ,ಅದು ಹೊಸ ಸ್ಥಳಗಳನ್ನುಕಂಡುಕೊಳ್ಳುವ,ಜನರೊಂದಿಗೆಬೆರೆಯುವ ಮತ್ತು ಮರೆಯಲಾಗದಕಥೆಗಳನ್ನು ಸೃಷ್ಟಿಸುವ ಒಂದುಅನುಭವ ಎಂಬುದನ್ನು ರಾಯಲ್ಎನ್‌ಫೀಲ್ಡ್ ತನ್ನ ‘ದಿ ಗ್ರೇಟ್ಇಂಡಿಯನ್ ಕ್ರಾಸ್‌ರೋಡ್ಸ್ ನಾರ್ತ್ಎಡಿಷನ್ ಮೂಲಕ ಸಾಭೀತು ಮಾಡಿದೆ.
ದಕ್ಷಿಣಭಾರತದ ಮಾಧ್ಯಮ ಪ್ರತಿನಿಧಿಗಳನ್ನುಹಿಮಾಲಯದ ನೆಲ,ಅಲ್ಲಿನ ಜನಜೀವನ,ಸಂಸ್ಕೃತಿ ಮತ್ತುಪ್ರಕೃತಿಯೊಂದಿಗೆ ಸಂಪರ್ಕಿಸುವಉದ್ದೇಶದಿಂದ ಆಯೋಜಿಸಲಾಗಿದ್ದಈ ವಿಶೇಷ ಅನುಭವಾತ್ಮಕ ಬೈಕ್ರೈಡ್‌ನಲ್ಲಿ ಬೆಂಗಳೂರು,ಚೆನ್ನೈ,ಹೈದರಾಬಾದ್,ಕೊಚ್ಚಿ ಮತ್ತುವಿಜಯವಾಡ ನಗರಗಳ 16ಪತ್ರಕರ್ತರುಭಾಗವಹಿಸಿದ್ದರು.
ಆರುದಿನಗಳ ಕಾಲ ನಡೆದ ಈ ಸಾಹಸಮಯಪ್ರಯಾಣದಲ್ಲಿ ಪತ್ರಕರ್ತರುಹಿಮಾಚಲ ಪ್ರದೇಶದ ಚಂಡೀಗಢ,ಮಶೋಬ್ರಾ,ಕುಲ್ಲು ಮತ್ತುಮಂಡಿ ಪ್ರದೇಶಗಳ ಮೂಲಕ ಸುಮಾರು730 ಕಿ.ಮೀ.ದೂರವನ್ನುಕ್ರಮಿಸಿದರು.ಈ ಸಂದರ್ಭದಲ್ಲಿರಾಯಲ್ ಎನ್‌ಫೀಲ್ಡ್‌ನ ಹಿಮಾಲಯ450, ಗೋರಿಲ್ಲಾ450, ಕ್ಲಾಸಿಕ್350, ಹಂಟರ್350, ಸ್ಕ್ರಾಮ್440 ಮತ್ತುಗೋನ್ ಕ್ಲಾಸಿಕ್ 350ಸೇರಿ ವಿವಿಧಮಾದರಿಯ ಬೈಕ್‌ಗಳನ್ನು ಸವಾರಿಗೆಬಳಸಲಾಗಿತ್ತು.
ವಿಶಿಷ್ಟಅನುಭವದ ಬೈಕ್ ಪಯಣ
ಹಿಮಾಲಯದತಿರುವು ಮುರುವು ರಸ್ತೆಗಳು,ಹಸಿರು ಕಣಿವೆಗಳು,ಪರ್ವತಗಳ ಅದ್ಭುತದೃಶ್ಯಗಳು ಮತ್ತು ಸ್ಥಳೀಯ ಜನರೊಂದಿಗೆನಡೆದ ಸಂವಾದಗಳು ಈ ಪ್ರಯಾಣವನ್ನುವಿಶಿಷ್ಟಗೊಳಿಸಿತು.ಪರ್ವತ ಪ್ರದೇಶದಲ್ಲಿಮೊದಲ ಬಾರಿಗೆ ದೀರ್ಘ ದೂರದ ಬೈಕ್ರೈಡ್ ಕೈಗೊಂಡ ಹಲವು ಪತ್ರಕರ್ತರು,ಈ ಪ್ರಯಾಣ ತಮ್ಮಆತ್ಮವಿಶ್ವಾಸವನ್ನು ಹೆಚ್ಚಿಸಿದೆಮತ್ತು ಸಾಹಸಮಯ ಸವಾರಿಯ ಬಗ್ಗೆಹೊಸ ಅನುಭವ ನೀಡಿದೆ ಎಂದುಅಭಿಪ್ರಾಯಪಟ್ಟರು.
ಇದುಕೇವಲ ಬೈಕ್ ರೈಡ್ ಅಲ್ಲ,ಭಾರತದ ವೈವಿಧ್ಯಮಯಸಂಸ್ಕೃತಿ ಮತ್ತು ಜನರ ಬದುಕನ್ನುಅರ್ಥಮಾಡಿಕೊಳ್ಳುವ ಒಂದು ಅದ್ಭುತಅವಕಾಶವಾಗಿತ್ತು.ಹಿಮಾಲಯವನ್ನುಹತ್ತಿರದಿಂದ ಅನುಭವಿಸುವ ಜೊತೆಗೆ,ಸ್ಥಳೀಯ ಸಮುದಾಯಗಳಜನಜೀವನವನ್ನು ಹತ್ತಿರದಿಂದತಿಳಿದುಕೊಳ್ಳಲು ಸಾಧ್ಯವಾಯಿತು.
ಸ್ಥಳೀಯಸಂಸ್ಕೃತಿ ಅಧ್ಯಯನದ ಸೇತು
ರಾಯಲ್ಎನ್‌ಫೀಲ್ಡ್‌ನ ದಿ ಗ್ರೇಟ್ಇಂಡಿಯನ್ ಕ್ರಾಸ್‌ರೋಡ್ಸ್ಕಾರ್ಯಕ್ರಮವು ಮೋಟಾರ್‌ಸೈಕ್ಲಿಂಗ್ಮೂಲಕ ಭಾರತವನ್ನು ಹೊಸ ದೃಷ್ಟಿಕೋನದಲ್ಲಿಪರಿಚಯಿಸುವ ಪ್ರಯತ್ನವಾಗಿದ್ದು,ಸ್ಥಳೀಯ ಸಂಸ್ಕೃತಿ,ಪರಿಸರ ಸಂರಕ್ಷಣೆಮತ್ತು ನೈಜ ಕಥೆಗಳನ್ನು ಜನರ ಮುಂದೆತರುವ ಮೂಲಕ ಜವಾಬ್ದಾರಿಯುತ ಪ್ರವಾಸಮತ್ತು ಅನ್ವೇಷಣೆಯ ಹೊಸ ಮಾದರಿಯನ್ನುರೂಪಿಸುತ್ತಿದೆ.
ಹಿಮಾಲಯದಹಾದಿಯಲ್ಲಿ ಆರಂಭವಾದ ಈ ಪಯಣ,ಕೇವಲ ಕಿಲೋಮೀಟರ್‌ಗಳದೂರವನ್ನು ಕ್ರಮಿಸುವ ಬದಲಾಗಿಜನರ ಹೃದಯಗಳನ್ನು ಸಂಪರ್ಕಿಸಿ,ಅನುಭವಗಳ ಅಮೂಲ್ಯನೆನಪುಗಳನ್ನು ಸೃಷ್ಟಿಸಿತು.