‘ಕುಂದಗೋಳ ಪರಿಸರದ ಹಿಂದೂಸ್ತಾನಿ ಸಂಗೀತಗಾರರು’ ಎಂಬ ವಿಷಯದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದ ಅವರು, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಆಕಾಶವಾಣಿ, ದೂರದರ್ಶನದ ‘ಬಿ’ ಹೈ ಶ್ರೇಣಿಯ ಕಲಾವಿದರಾಗಿದ್ದ ಅವರು, ಜೈಪುರ, ಗ್ವಾಲಿಯರ್, ದೆಹಲಿ, ಕೋಲ್ಕತ್ತ, ಮುಂಬೈ ಮಾತ್ರವಲ್ಲದೆ ದೇಶ ಹಾಗೂ ವಿದೇಶದ ವಿವಿಧೆಡೆ ಅವರು ಸಂಗೀತ ಕಛೇರಿ ನೀಡಿದ್ದಾರೆ.