ಇದೀಗ, ಕಸ ಹಾಕುವ ಪ್ರಮುಖ ಜಾಗಗಳನ್ನು ಆಯ್ಕೆ ಮಾಡಿಕೊಂಡು ಆ ಸ್ಥಳದಲ್ಲಿನ ಕಸ ಸ್ವಚ್ಛ ಮಾಡಿ, ರಂಗೋಲಿ ಬಿಟ್ಟು, ಪೂಜೆ ಮಾಡಿ, ಆ ಜಾಗದಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ.ಸಮಸ್ಯೆ ನಿವಾರಣೆ: ತ್ಯಾಜ್ಯ ವಿಲೇವಾರಿ ಘಟಕದ ಸ್ಥಗಿತದಿಂದಾಗಿ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ನಗರಸಭೆಗೆ ಈ ಹಿಂದೆ ಸಾಕಷ್ಟು ಸಮಸ್ಯೆಯಾಗಿತ್ತು.