ಗಂಧದ ಮರಗಳ ಕಳ್ಳರನ್ನು ದೊಡ್ಡಬಳ್ಳಾಪುರ ಇನ್ಸ್ಪೆಕ್ಟರ್ ಮುತ್ತುರಾಜು ನೇತೃತ್ವದಲ್ಲಿ ಬಂಧಿಸಿರುವುದು. ಸಿಬ್ಬಂದಿ ಶಿವಾನಂದ, ಹುಸೇನ್, ಪಾಂಡುರಂಗ, ರೂಪೇಶ್, ಮುನಿರಾಜು ಇತರರು ಇದ್ದರು.
Published on:
Copied
Follow Us
ದೊಡ್ಡಬಳ್ಳಾಪುರ : ನಗರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಂಧದ ಮರ ಕಳ್ಳತನದ ಪ್ರಕರಣವನ್ನು ಪೊಲೀಸರು ಭೇದಿಸಿ ಇಬ್ಬರನ್ನು ಬಂಧಿಸಿದ್ದು, ಒಟ್ಟು 254 ಕೆಜಿ ತೂಕದ ಗಂಧದ ಮರದ ತುಂಡುಗಳು, ಪೆಟ್ರೋಲ್ ಚಾಲಿತ ಗರಗಸ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ವೆಂಕಟೇಶ್ (26), ತುಮಕೂರಿನ ಅರುಣ್ (34) ಬಂಧಿತರು. ಈ ಇಬ್ಬರೂ ಬಿದಿರು ಬುಟ್ಟಿ ತಯಾರಿಕೆ ಕೆಲಸ ಮಾಡುತ್ತಿದ್ದು, ಕುರುಬರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವೆಂಕಟೇಶ್ ವಿರುದ್ಧ ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಸಿಸಿ ಕ್ಯಾಮರಾ ಆಧರಿಸಿ ಕಾರ್ಯಾಚರಣೆ: ಜೂ.13ರಂದು ಮಧ್ಯರಾತ್ರಿ ನಗರ ಠಾಣಾ ವ್ಯಾಪ್ತಿಯ ಕಛೇರಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಒಂದು ಗಂಧದ ಮರ ಹಾಗೂ ದರ್ಗಾ ಮೊಹಲ್ಲಾದ ಸ್ಮಶಾನದಲ್ಲಿದ್ದ ಮತ್ತೊಂದು ಗಂಧದ ಮರವನ್ನು ಕಡಿದು ಕಳವು ಮಾಡಿದ್ದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿ ಕ್ಯಾಮರಾ ಆಧರಿಸಿ ಆರೋಪಿಗಳ ಚಲನವಲನ ಪತ್ತೆಹಚ್ಚಿದರು. ಕಳವು ಮಾಡಿದ್ದ ಗಂಧದ ಮರದ ತುಂಡುಗಳನ್ನು ಸ್ಯಾಂಟ್ರೋ ಕಾರಿನಲ್ಲಿ ಸಾಗಿಸಿ ಕುರುಬರಹಳ್ಳಿ ಸಮೀಪ ಅಡಗಿಸಿಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.