ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ರಿಷಿಕಾ ಅವರಿಗೆ ಸಿಹಿ ತಿನಿಸಿ ಸಂಭ್ರಮಿಸುತ್ತಿರುವ ಪಾಲಕರಾದ ರಾವೇಂದ್ರ ಮತ್ತು ರೂಪಾ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದ ರಿಷಿಕಾ
ಹಿಂದಿಯಲ್ಲಿ ಶೇ. 100ರಷ್ಟು ಸಾಧನೆ
ಸೈದಾಪುರ: ಇಲ್ಲಿನ ಹಿರಿಯ ಪತ್ರಿಕಾ ವಿತರಕ ಕೆ.ಬಿ.ರಾವೇಂದ್ರ ಮತ್ತು ಕೆ.ಬಿ.ರೂಪಾ ದಂಪತಿಗಳ ಹಿರಿಯ ಮಗಳಾದ ರಿಷಿಕಾ ಕೆ.ಬಿ.ಅವರು ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಶೇ.96.32 ಅಂಕ ಪಡೆದು ಅಮೋ ಸಾಧನೆ ಮಾಡಿದ್ದಾಳೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಥಳಿಯ ಎಸ್ಬಿಎಂ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ. ಆರಂಭದಿಂದಲೂ ಓದಿನಲ್ಲಿ ಮುಂಚೂಣಿಯಲ್ಲಿದ್ದ ಈಕೆ ಪಾಲಕರ ಸಹಕಾರ, ಶಿಕ್ಷಕರ ಗುಣಾತ್ಮಕ ಬೋಧನೆಯನ್ನು ಮನದಟ್ಟು ಮಾಡಿಕೊಂಡು ನಿರಂತರ ಪರಿಶ್ರಮದಿಂದಾಗಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 602 ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.
ಪತ್ರಿಕಾ ವಿತರಣೆ ಜತೆಗೆ ಮೆಡಿಕಲ್ ಶಾಪ್ ಅನ್ನು ಹೊಂದಿರುವ ತಂದೆ ಕೆ.ಬಿ.ರಾವೇಂದ್ರ ಅವರು ಮಗಳನ್ನು ಡಾಕ್ಟರ್ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಪುತ್ರಿ ರಿಷಿಕಾ ಕೂಡ ಎಸ್ಸೆಸ್ಸೆಲ್ಸಿ ಮುಗಿತು ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುತ್ತ ನಮ್ಮ ಪಾಲಕರ ಅಪೇೆಯೇ ನನ್ನ ಗುರಿಯಾಗಿದೆ ಇದಕ್ಕಾಗಿ ಪಿಯುಸಿಯಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದು ತಂದೆಯ ಕನಸು ನನಸು ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾಳೆ. ಇದಲ್ಲದೆ ಸ್ವತ@ ರಿಷಿಕಾ ಸಹ ವೈದ್ಯೆಯಾಗಿ ಅಸಹಾಯಕ ಜನರ ಆರೋಗ್ಯ ಸೇವೆ ಮಾಡಬೇಕು ಎಂಬ ಸದುದ್ದೇಶವನ್ನು ಹೊಂದಿದ್ದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
ಗ್ರಾಮೀಣ ಪ್ರತಿಭೆಯೊಂದು ನಗರ ಮಟ್ಟದ ವಿದ್ಯಾರ್ಥಿಗಳನ್ನು ಮೀರಿಸುವ ಮಟ್ಟಿಗೆ ಸಾಧನೆ ಮಾಡಿದ್ದು ಎಲ್ಲರ ಮೆಚ್ಚುಗೆ ಪಡೆದಿದ್ದು, ಮಗುವಿನ ಸಾಧನೆಗೆ ಶಾಲಾ ಶಿಕ್ಷಕರ ಅದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"
ಗ್ರಾಮೀಣ ಮಟ್ಟದಲ್ಲಿ ಇದ್ದುಕೊಂಡು ನಮ್ಮ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅತೀವ ಸಂತಸ ತಂದಿದೆ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂಬ ಸಂಕಲ್ಪ ಇದಕ್ಕಾಗಿ ಅವಳ ಮುಂದಿನ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ.