

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ದರೋಡೆಕೋರನೊಬ್ಬ ಮಂಗಳಮುಖಿ ಬಳಿ 200 ರೂ. ಕಿತ್ತುಕೊಳ್ಳುವ ಭರದಲ್ಲಿ ಆಕೆಗೆ ಡ್ರಾೃಗರ್‌ನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ. ಈ ಸಂಬಂಧ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಗೌತಮ್ ಮದ್ಯ ಸೇವಿಸಿ ಡಿಯೋ ಸ್ಕೂಟರ್‌ನಲ್ಲಿ ದರೋಡೆ ಮಾಡಲೆಂದೇ ಮೆಜೆಸ್ಟಿಕ್ ಬಳಿ ಹೋಗಿದ್ದ. ಆಗ ಕೊಲೆ ಕೃತ್ಯ ನಡೆದಿದೆ. ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ, ದರೋಡೆ ಮಾಡಿದ್ದ ಮೊಬೈಲ್ ಮತ್ತು ಹಣ ಜಪ್ತಿ ಮಾಡಿದ್ದೇವೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
— ಎನ್. ಯತೀಶ್, ಡಿಸಿಪಿ, ಪಶ್ಚಿಮ ವಿಭಾಗ