ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷ ಶಿವನಂಜಯ್ಯ, ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ ಚಿಕ್ಕಲ್ಲೂರು ಮಾತನಾಡಿದರು. ಟೌನ್‌ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗೊಂದು ಗ್ರಂಥಾಲಯದ ಕೇಂದ್ರ ಮತ್ತು ಅದರ ಕರ ಪತ್ರಗಳನ್ನು ಕಾರ್ಯಕ್ರಮಕ್ಕೂ ಮುನ್ನ ಬಿಡುಗಡೆಗೊಳಿಸಲಾಯಿತು. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿ.ಟಿ ರವಿಕುಮಾರ್, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಆಯೋಜಕಿ ಹಾಗೂ ಶಿಕ್ಷಕಿ ಚಿಕ್ಕಮ್ಮ, ಮುಖಂಡರಾದ ಕ್ರಷ್ಣ, ದೊರೆಸ್ವಾಮಿ, ನಾಗರಾಜು, ಕಬ್ಬಾರೆ ಶಂಕರ್ ಇತರರಿದ್ದರು.