ಮಸಣಿಗುಡಿಯ ಮಾಯರ್‌ನಾಲ್‌ಸೇಲಪ್ಪ ಕಾಲನಿಯ ವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ 9.30ರ ವೇಳೆಗೆ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ನಂಜಸ್ವಾಮಿ ಅವರ ಮನೆಗೆ ನುಗ್ಗಿದೆ. ಚಿರತೆಯನ್ನು ಕಂಡ ಕೂಡಲೇ ಎಚ್ಚತ್ತ ಮನೆ ಮಾಲೀಕ ತಕ್ಷಣ ಹೊರಬಂದು ಬಾಗಿಲನ್ನು ಮುಚ್ಚಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪಹೊತ್ತು ಮನೆಯಿಂದ ಹೊರಬರಲು ಯತ್ನಿಸಿದ ಚಿರತೆ ನಂತರ ಮಂಚದ ಕೆಳಗೆ ಮಲಗಿದೆ.