ಗುರುವಿನ ಮಾರ್ಗದರ್ಶನ ಉನ್ನತಿಗೆ ವರದಾನ

ಮಹಾಲಿಂಗಪುರದಲ್ಲಿ ಗುರುಲಿಂಗೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಹಾಲಿಂಗೇಶ್ವರ ಶ್ರೀಗಳ ತುಲಾಬಾರ ಮಾಡಲಾಯಿತು. ಗುರುಪಾದಯ್ಯ ಛಟ್ಟಿಮಠ, ಈಶ್ವರ ಮಠದ, ಮಹಾಂತೇಶ ಹಿಟ್ಟಿನಮಠ, ಸಾಗರ ಮಠದ, ಚನ್ನಯ್ಯ ಮಸಗುಪ್ಪಿಮಠ, ಬಸಯ್ಯ ಛಟ್ಟಿಮಠ, ಈರಯ್ಯ ಛಟ್ಟಿಮಠ, ಅರವಿಂದ ಮಾಲಬಸರಿ, ಸದಾಶಿವ ಹಿರೇಮಠ, ಪರಯ್ಯ ಮಠದ ಇತರರಿದ್ದರು.
ಮಹಾಲಿಂಗಪುರದಲ್ಲಿ ಗುರುಲಿಂಗೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಹಾಲಿಂಗೇಶ್ವರ ಶ್ರೀಗಳ ತುಲಾಬಾರ ಮಾಡಲಾಯಿತು. ಗುರುಪಾದಯ್ಯ ಛಟ್ಟಿಮಠ, ಈಶ್ವರ ಮಠದ, ಮಹಾಂತೇಶ ಹಿಟ್ಟಿನಮಠ, ಸಾಗರ ಮಠದ, ಚನ್ನಯ್ಯ ಮಸಗುಪ್ಪಿಮಠ, ಬಸಯ್ಯ ಛಟ್ಟಿಮಠ, ಈರಯ್ಯ ಛಟ್ಟಿಮಠ, ಅರವಿಂದ ಮಾಲಬಸರಿ, ಸದಾಶಿವ ಹಿರೇಮಠ, ಪರಯ್ಯ ಮಠದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧಲಿಂಗ ಶಿವಾಚಾರ್ಯರ ಅಭಿಮತ
  • ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ
ಮಹಾಲಿಂಗಪುರ: ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ಮಹಾನ್ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಸಾಲಹಳ್ಳಿ-ಚಿಪ್ಪಲಕಟ್ಟಿ ಬಹನ್ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ನಗರದಲ್ಲಿ ಗುರು ಮಹಾಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಜಂಗಮ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಗುರುಲಿಂಗೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ಹಾಗೂ ಮಹಾಲಿಂಗೇಶ್ವರ ಶ್ರೀಗಳ ತುಲಾಬಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುವಿನಿಂದ ದೊರೆಯುವ ದೀಕ್ಷೆ ಮತ್ತು ಜ್ಞಾನವೇ ಜೀವನದ ನಿಜವಾದ ಮಾರ್ಗದರ್ಶನ ಎಂದು ಹೇಳಿದರು. ಜಂಗಮರು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ದಾರಿದೀಪವಾಗಿದ್ದು, ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮಹಾಲಿಂಗೇಶ್ವರ ಶ್ರೀಗಳು ಮಾತನಾಡಿ, ಭಕ್ತಿ ಮತ್ತು ಪ್ರೀತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು. ಗುರುವಿನ ಕಪೆಯಿಂದ ದೊರೆಯುವ ಸಂಸ್ಕಾರವೇ ನಿಜವಾದ ಪ್ರಸಾದವಾಗಿದ್ದು, ಜೀವನವನ್ನು ಸಾರ್ಥಕಗೊಳಿಸುತ್ತದೆ ಎಂದರು.
ವಿವಿಧ ಸಮಾಜದ ಗಣ್ಯರು ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು.
ಕಾರ್ಯಕ್ರಮದ ಅಂಗವಾಗಿ ಶ್ರೀಗಳಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಲಾಯಿತು. 100ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ನೀಡಲಾಗಿದ್ದು, ಜನ್ಮಶತಾಬ್ದಿ ಪ್ರಯುಕ್ತ ತುಲಾಭಾರ ಕೂಡ ನೆರವೇರಿತು.
ಜಂಗಮ ಕ್ಷೇಮಾಭಿವದ್ಧಿ ಸಂಘದ ಅಧ್ಯಕ್ಷ ಗುರುಪಾದಯ್ಯ ಛಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಸಮಾಜದ ಪ್ರಮುಖರಾದ ಈಶ್ವರ ಮಠದ, ಸಾಗರ ಮಠದ, ಮಹಾಂತೇಶ ಮನ್ನಯ್ಯನವರಮಠ, ಚನ್ನಯ್ಯ ಮಸಗುಪ್ಪಿಮಠ, ಬಸಯ್ಯ ಛಟ್ಟಿಮಠ, ಈರಯ್ಯ ಛಟ್ಟಿಮಠ, ಗುರುಲಿಂಗಯ್ಯ ಮಠಪತಿ, ವಿ.ಐ. ಪಂಚಕಟ್ಟಿಮಠ, ಚನ್ನಯ್ಯ ಛಟ್ಟಿಮಠ, ಅರವಿಂದ ಮಾಲಬಸರಿ, ಸದಾಶಿವ ಹಿರೇಮಠ, ಮತ್ಯುಂಜಯ ಮಠಪತಿ, ಪರಯ್ಯ ಮಠದ, ವಿಶ್ವನಾಥ ಹಿರೇಮಠ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net