ನೆಲಮಂಗಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್ ಮಾತನಾಡಿ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿರುವ ಮಕ್ಕಳಿಗೆ ಈ ಪುಸ್ತಕವು ದಾರಿದೀಪವಾಗಿದೆ ಎಂದರು. ಬೇಡಿಕೆ ಇರುವ ಕೋರ್ಸ್ಗಳ ಬಗ್ಗೆ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಮಕ್ಕಳಿಗೆ ಹೆಚ್ಚು ನೆರವಾಗಲಿದೆ ಎಂದು ಲೇಖಕ ನಾರಾಯಣ ಎಂ ಭಟ್ ತಿಳಿಸಿದರು. ನೆಲಮಂಗಲ ನಗರಸಭಾ ಮಾಜಿ ಸದಸ್ಯ ಕೃಷ್ಣಪ್ಪ, ಮುಖ್ಯ ಶಿಕ್ಷಕ ಅಂಜನಮೂರ್ತಿ, ಎಚ್.ಕೆ.ರಮೇಶ್ ಇದ್ದರು.