ಶರಣರ ಸಂದೇಶ ಸಮಾಜಕ್ಕೆ ತಿಳಿಸಿದ ಮಹಾನ್​ ಚೇತನ

ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿಯಲ್ಲಿ ಕರ್ನಾಟಕ ಸಾಂಸತಿಕ ನಾಯಕ ಬಸವಣ್ಣ ಗ್ರಂಥವನ್ನು ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಬಿಡುಗಡೆ ಮಾಡಿದರು. ಗುರಲಿಂಗಪ್ಪಗೌಡ ಪಾಟೀಲ್​, ಭಗವಂತರಾಯಗೌಡ ಪಾಟೀಲ್​, ರವೀಂದ್ರ ಕೋಳಕೂರ, ಎಸ್​.ಕೆ.ಬಿರಾದಾರ, ಚನ್ನಮಲ್ಲಯ್ಯ ಹಿರೇಮಠ ಇದ್ದರು.
ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿಯಲ್ಲಿ ಕರ್ನಾಟಕ ಸಾಂಸತಿಕ ನಾಯಕ ಬಸವಣ್ಣ ಗ್ರಂಥವನ್ನು ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಬಿಡುಗಡೆ ಮಾಡಿದರು. ಗುರಲಿಂಗಪ್ಪಗೌಡ ಪಾಟೀಲ್​, ಭಗವಂತರಾಯಗೌಡ ಪಾಟೀಲ್​, ರವೀಂದ್ರ ಕೋಳಕೂರ, ಎಸ್​.ಕೆ.ಬಿರಾದಾರ, ಚನ್ನಮಲ್ಲಯ್ಯ ಹಿರೇಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್​ಸಿ ಶಶೀಲ್​ ನಮೋಶಿ ಬಣ್ಣನೆ
  • ಜೇವರ್ಗಿಯಲ್ಲಿ ಡಾ.ಫ.ಗು.ಹಳಕಟ್ಟಿ ಜಯಂತಿ
ಜೇವರ್ಗಿ: ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನ್ಯರ್ ರತ್ನವನ್ನು ಶೋಧಿಸಿ, ಸಂಗ್ರಹಿಸಿ ಸಂಶೋಧನಾ ಕೇತ್ರಕ್ಕೆ ನೀಡುವ ಮೂಲಕ ವಚನ ಕ್ಷೇತ್ರಕ್ಕೆ ಡಾ.ಫ.ಗು.ಹಳಕಟ್ಟಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಹೇಳಿದರು.
ಸಜ್ಜನ್​ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್​, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​, ಕದಳಿ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಉದ್ಘಾಟಿಸಿ ಮಾತನಾಡಿ, ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಿಸದಿದ್ದರೆ ಇಂದು ನಮಗೆ ಶಿವಶರಣರ ತತ್ವ, ಆದರ್ಶ ತಿಳಿಯುತ್ತಿರಲಿಲ್ಲ. ಒಬ್ಬ ಸಾಮಾನ್ಯ ವಕೀಲರಾಗಿದ್ದುಕೊಂಡು ಶರಣರ ತತ್ವಾದರ್ಶ ಹಾಗೂ ಅವರೊಳಗಿದ್ದ ವೈಚಾರಿಕ ಮಾನವ ಪ್ರೆಯನ್ನು ಎತ್ತಿ ತೋರಿಸಿದ ಕೀರ್ತಿ ಹಳಕಟ್ಟಿಗೆ ಸಲ್ಲುತ್ತದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಭಗವಂತರಾಯಗೌಡ ಪಾಟೀಲ್​ ಅಂಕಲಗಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದತ್ತ ಹೆಚ್ಚಿನ ಗಮನ ನೀಡಿದ್ದ ಹಳಕಟ್ಟಿ ಅವರು ತಾಳೆಗರಿ ಹಸ್ತಪ್ರತಿ ಸಂಗ್ರಹಿಸತೊಡಗಿದರು. 1920ರ ಹೊತ್ತಿಗಾಗಲೇ ಒಂದು ಸಾವಿರ ಕಟ್ಟು ಸಂಗ್ರಹ ಮಾಡಿದ್ದರು. ವಕೀಲರಾಗಿದ್ದರೂ ತಮ್ಮ ವೃತ್ತಿಯ ಜತೆಗೆ ವಚನ ಸಂಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅಂಥ ಮಹಾನ್​ ವ್ಯಕ್ತಿಯ ಜೀವನ ತತ್ವಗಳು ಈಗಿನ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಪ್ರಮುಖ ಬಸವಕುಮಾರ ಪಾಟೀಲ್​ ಮಾತನಾಡಿ, ಇಂದಿನ ಮಕ್ಕಳು ದಿನಕ್ಕೆ ಒಂದು ವಚನವಾದರೂ ಅಭ್ಯಾಸ ಮಾಡುವುದರ ಜತೆಗೆ ಮನೆ&ಮನಗಳಿಗೆ ಹಂಚುವ ಕೆಲಸ ಮಾಡಿದರೆ ಹಳಕಟ್ಟಿ ಅವರು ಕಂಡ ಕನಸು ನನಸಾಗುತ್ತದೆ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಗುರಲಿಂಗಪ್ಪಗೌಡ ಪಾಟೀಲ್​ ಆಂದೋಲ, ಪ್ರಮುಖರಾದ ರವೀಂದ್ರ ಕೋಳಕೂರ, ದಯಾನಂದ ದೇವರಮನಿ, ಎಸ್​.ಕೆ.ಬಿರಾದಾರ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಜ್ಯೋತಿ ಎಂ. ಮರಗೋಳ, ಶಂಭುಲಿಂಗ ದೇಸಾಯಿ, ಸೋಮಶೇಖರ ಗುಡೂರ, ನಿಂಗಣ್ಣ ಭಂಡಾರಿ, ಡಾ.ಧರ್ಮಣ್ಣ ಬಡಿಗೇರ, ಶ್ರೀಹರಿ ಕರಕಳ್ಳಿ, ರವಿಚಂದ್ರ ಗುತ್ತೇದಾರ್​, ಪರಮೇಶ್ವರ ಬಿರಾಳ, ಶಾಂತಮೂರ್ತಿ ಗೊಂಬಿಮಠ, ಭಗವಂತರಾಯ ಬೆಣ್ಣೂರ, ಭೀಮಾಶಂಕರ ಬಿಲ್ಲಾಡ, ಬಂಗಾರಪ್ಪ ಆಡಿನ, ಹಣಮಂತ್ರಾಯ ರಾಂಪೂರ, ರವಿ ಕುಳಗೇರಿ, ಸಿದ್ದು ಕೇರೂರ, ಶರಭು ಕಲ್ಯಾಣಿ ಇತರರಿದ್ದರು.
ಮಿನಿ ವಿಧಾನಸೌದದಿಂದ ಸಜ್ಜನ್​ ಕಲ್ಯಾಣ ಮಂಟಪದವರೆಗೆ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಕವಿತಾ ಹಳ್ಳಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net