ದೇಶ ಕಾಯುವ ಸೈನಿಕ ತಾಯಿಗೆ ಶ್ರೇಷ್ಠ ಮಗ

ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಗಡ್ಡೆಪ್ಪ ರಾವತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವತ್ತಿ ಹೊಂದಿದ ನಿಮಿತ್ತ ಅವರಿಗೆ ಸಾಲೋಟಗಿ ಗ್ರಾಮದಲ್ಲಿ ಸನ್ಮಾನಿಸಲಾಯಿತು. ಜೀತಪ್ಪ ಕಲ್ಯಾಣಿ, ಅರ್ಜುನ ನೇದಲಗಿ, ಗಡ್ಡೆಪ್ಪ ಯಳಸಂಗಿ ಮತ್ತಿತರರಿದ್ದರು.
ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಗಡ್ಡೆಪ್ಪ ರಾವತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವತ್ತಿ ಹೊಂದಿದ ನಿಮಿತ್ತ ಅವರಿಗೆ ಸಾಲೋಟಗಿ ಗ್ರಾಮದಲ್ಲಿ ಸನ್ಮಾನಿಸಲಾಯಿತು. ಜೀತಪ್ಪ ಕಲ್ಯಾಣಿ, ಅರ್ಜುನ ನೇದಲಗಿ, ಗಡ್ಡೆಪ್ಪ ಯಳಸಂಗಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳ ಅನಿಸಿಕೆ
  • ಸನ್ಮಾನ ಸಮಾರಂಭ
ಇಂಡಿ: ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಸೈನಿಕ ಇಬ್ಬರೂ ತಾಯಿಗೆ ಶ್ರೇಷ್ಠ ಮಕ್ಕಳು ಎಂದು ಸಾಲೋಟಗಿ ಸಿದ್ಧೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಯೋಧರಾದ ಗಡ್ಡೆಪ್ಪ ರಾವತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಅವರಿಗೆ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ರೈತ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡುತ್ತಿದ್ದರೆ, ಸೈನಿಕ ನಮ್ಮ ವೈರಿಗಳಿಂದ ರಕ್ಷಿಸಲು ದೇಶದ ಗಡಿಯಲ್ಲಿ ತನ್ನ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾನೆ. ಅದಕ್ಕಾಗಿ ಸೈನಿಕನಿಗೆ ಸಮಾಜದಲ್ಲಿ ಗೌರವವಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿ ಧನರಾಜ ಮುಜಗೊಂಡ ಮಾತನಾಡಿ, ಸೈನಿಕರು ಮಳೆ, ಚಳಿ, ಬಿಸಿಲು ಎನ್ನದೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗುವ ಸೈನಿಕರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಸಾಹಿತಿ ಗೀತಯೋಗಿ, ದ್ರಾಕ್ಷಾಯಿಣಿ ತಡಲಗಿ, ಬಸವರಾಜ ಗೊರನಾಳ ಮಾತನಾಡಿದರು.
ನಿವೃತ್ತ ಸೈನಿಕರಾದ ಗಡ್ಡೆಪ್ಪ ರಾವತಪ್ಪ ಕಾಳಿ ಮತ್ತು ಶ್ರೀಶೈಲ ಗಂಗಪ್ಪ ನಾಟಿಕಾರ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಆಗಮಿಸಿದ ಹಿನ್ನೆಲೆ ಪಟ್ಟಣದ ರೈಲ್ವೆ ನಿಲ್ದಾಣದಿಂದ ತೆರೆದ ವಾಹನದಲ್ಲಿ ನೂರಾರು ದ್ವಿಚಕ್ರ ವಾಹನಗಳೊಂದಿಗೆ ಶಿವಾಜಿ ವೃತ್ತ, ಮಹಾವೀರ, ಅಂಬೇಡ್ಕರ್, ಬಸವೇಶ್ವರ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಸಾಲೋಟಗಿ ಗ್ರಾಮದವರೆಗೆ ಮೆರವಣೆಗೆ ಮಾಡಲಾಯಿತು.
ಆಳೂರ ಸಿದ್ಧರೂಢ ಮಠದ ಶಂಕರಾನಂದ ಸ್ವಾಮೀಜಿ, ತಾ.ಪಂ ಮಾಜಿ ಸದಸ್ಯ ಜೀತಪ್ಪ ಕಲ್ಯಾಣಿ, ಅರ್ಜುನ ನೇದಲಗಿ, ಗಡ್ಡೆಪ್ಪ ಯಳಸಂಗಿ, ಈರಯ್ಯ ಮಂಗಳೂರ, ಅಶೋಕ ಈಶ್ವರಗೊಂಡ, ಅನೀಲ ಪರೇಶನವರ, ಬಸವರಾಜ ಕಲ್ಯಾಣಿ, ಸೋಮನಾಥ ಹರನಾಳ, ಶರಣಯ್ಯ ಮಠಪತಿ, ಶಿವಯೋಗಪ್ಪ ತಡಲಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net