ಶ್ರದ್ಧೆಯ ಉದ್ಯೋಗದಿಂದ ಭವ್ಯ ಬದುಕು

ಬಸವಕಲ್ಯಾಣದ ಶ್ರೀ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಬಸವ ಜಯಂತಿ ಮತ್ತು ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ  ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಚಾಲನೆ ನೀಡಿದರು. ಅನಿಲಕುಮಾರ ರಗಟೆ,  ಶಶಿಕಾಂತ ದುರ್ಗೆ, ಡಾ.ಜಿ.ಎಸ್​.ಭುರಳೆ, ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಸುನೀಲ ರಾಯವಾಡೆ, ಬಸವರಾಜ ಕೋರಕೆ, ಈರಣ್ಣ ಹಲಶೆಟ್ಟೆ, ವಿವೇಕಾನಂದ ಹೊದಲೂರೆ, ನಾಗಯ್ಯ ಸ್ವಾಮಿ ಇತರರಿದ್ದರು
ಬಸವಕಲ್ಯಾಣದ ಶ್ರೀ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಬಸವ ಜಯಂತಿ ಮತ್ತು ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಚಾಲನೆ ನೀಡಿದರು. ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ, ಡಾ.ಜಿ.ಎಸ್​.ಭುರಳೆ, ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಸುನೀಲ ರಾಯವಾಡೆ, ಬಸವರಾಜ ಕೋರಕೆ, ಈರಣ್ಣ ಹಲಶೆಟ್ಟೆ, ವಿವೇಕಾನಂದ ಹೊದಲೂರೆ, ನಾಗಯ್ಯ ಸ್ವಾಮಿ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಅಭಿಮತ
  • ಬಸವಕಲ್ಯಾಣದಲ್ಲಿ ಉದ್ಯೋಗ ಮೇಳ
ಬಸವಕಲ್ಯಾಣ: ಸಮಾನತೆಯ ಸಂದೇಶ ಸಾರಿದ ಬಸವಣ್ಣ ಮತ್ತು ಸಮಾನತೆ ಸಾಮಾಜಿಕ ನ್ಯಾಯ ಕಲ್ಪಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್​ ಅವರು ದೇಶದ ದೊಡ್ಡ ಸಾಮಾಜಿಕ ಶಕ್ತಿಗಳು. ಶ್ರಮಿಕರ ಪರವಾಗಿ ಹೋರಾಟ ಮಾಡಿದ ಬಸವಣ್ಣ ಹಾಗೂ ಶ್ರಮಿಕರನ್ನು ಸುಖವಾಗಿರಿಸಿದ ಅಂಬೇಡ್ಕರ್​ರ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಿಗರಳ್ಳಿಯ ಮರುಳ ಶಂಕರದೇವ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಬಸವ ಜಯಂತಿ ಮತ್ತು ಮಹಾತ್ಮ ಬಸವೇಶ್ವರರ 76ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಯುವ ಜನತೆಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ಆಶಯದೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಿದ್ದಾರೆ. ಇದರಲ್ಲಿ ಆಯ್ಕೆಯಾದವರು ಸಿಕ್ಕ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಉದ್ಯೋಗದಿಂದ ಭವ್ಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಕೆಲಸದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲದಿಂದ ಕೂಡಿದ ಉದ್ಯೋಗಕ್ಕೆ ಹೆಚ್ಚು ಮಹತ್ವವಿದೆ. ಉದ್ಯೋಗದಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಸುಧಾರಣೆಯಾಗುತ್ತದೆ. ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಿದೆ ಎಂದರು.
ವ್ಯಾಲಿ ಕಂಪನಿಯ ಸಿಇಒ ನಿಲೇಶ ನಿತ್ನಾವರೆ ಉದ್ಯೋಗ ಮೇಳದ ವಿವರ ನೀಡಿದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿಗಳಾದ ಬಸವರಾಜ ಬಾಲಕಿಲೆ, ಸುನೀಲ ರಾಯವಾಡೆ, ನಿರ್ದೇಶಕರಾದ ಬಸವರಾಜ ಕೋರಕೆ, ಈರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಮಲ್ಲಿಕಾರ್ಜುನ ಚಿರಡೆ, ಸುನೀಲಕುಮಾರ ಹೊಳಕುಂದೆ, ರಾಜಕುಮಾರ ಹೊಳಕುಂದೆ, ಪುಷ್ಪಾವತಿ ಮಾಮಾ, ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್​. ಭುರಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಶಿವರಾಜ ಶಾಶೆಟ್ಟಿ, ಬಸವರಾಜ ಪಾಟೀಲ, ಸೋಮಶೇಖರಯ್ಯ ವಸದ, ಮಲ್ಲಿನಾಥ ಮಂಠಾಳೆ, ಉದ್ಯೋಗ ಮೇಳದ ಸಹ ಸಂಯೋಜಕ ಸಂದೀಪ್​ ಪಾಟೀಲ್​ ಇತರರಿದ್ದರು. ಆಕಾಶ ಖಂಡಾಳೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಜ್ಞಾನರೆಡ್ಡಿ ಬೋಳಿಂಗೆ ಸ್ವಾಗತಿಸಿದರು. ಜಗನ್ನಾಥ ಖ್ಯಾಡೆ ನಿರೂಪಣೆ ಮಾಡಿದರು. ರಾಜಕುಮಾರ ನಾಗರಾಳೆ ವಂದಿಸಿದರು.
ಉದ್ಯೋಗ ಮೇಳ: ಬೃಹತ್​ ಉದ್ಯೋಗ ಮೇಳದಲ್ಲಿ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನಗರ ಪ್ರದೇಶದ ದೊಡ್ಡ ಕಂಪನಿ ಗಳೊಂದಿಗೆ ಸಂವಹನ ನಡೆಸಲು ಉದ್ಯೋಗ ಮೇಳವು ಉತ್ತಮ ವೇದಿಕೆ ಕಲ್ಪಿಸಿತು. ದೇಶದ ಪ್ರತಿಷ್ಠಿತ ಕಂಪನಿಗಳಾದ ವ್ಯಾಲಿ, ಫೆಲಿಕ್ಸ್​, ಅಂಬರ್​, ಕಲ್ಯಾಣಿ, ಧನಂಜಯ, ಸಂಜೀವ, ರೇವೆಂಟ್​, ರಾಧೇಯಾ ಗ್ರೂಪ್ಸ್​, ಫಿನಾಬೆಲ್​, ಕ್ರೋಮ್​ ವೆಲ್​ ಸೇರಿ ಸುಮಾರು 15 ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದವು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆಯಾದ 175 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಅಥವಾ ಮುಂದಿನ ಹಂತದ ಸಂದರ್ಶನಕ್ಕಾಗಿ ಆಯ್ಕೆ ಪತ್ರಗಳನ್ನು ವಿತರಿಸಲಾಯಿತು.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net