ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಸಂಚರಿಸಲಿರುವ ಈ ರಥ ಯಾತ್ರೆಯ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸೇವಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾಣಿಕನಗರ ರಸ್ತೆಯಲ್ಲಿರುವ ಭವಾನಿ ದೇವಸ್ಥಾನದಿಂದ ಆರಂಭವಾದ ರಥ ಯಾತ್ರೆ ಪಟ್ಟಣದ ಪ್ರಮುಖ ಮಾರ್ಗವಾದ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಪಟೇಲ್ ಚೌಕ, ಬಸವೇಶ್ವರ ಚೌಕದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಂಚರಿಸಿತು. ಮಾನವೀಯ ಮೌಲ್ಯ,ಸೇವೆಯ ಸಂದೇಶ ಜನತೆಗೆ ತಲುಪಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಈ ರಥ ಸಂಚರಿಸುತ್ತಿದೆ. ಸೇವಾ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ರಥ ಯಾತ್ರೆ ಆಯೋಜಿಸಲಾಗುತ್ತಿದೆ. ಈ ದಿಸೆಯಲ್ಲಿ ರಥವು ಪಟ್ಟಣದಲ್ಲಿ ಸಂಚರಿಸಿದ ದಾರಿ ಮಧ್ಯದಲ್ಲಿ ಭಕ್ತಿ ಭಾವದಿಂದ ಸಾರ್ವಜನಿಕರು ಪೂಜೆ ಸಲ್ಲಿಸಿ ರಥವನ್ನು ಭವ್ಯವಾಗಿ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಕುಟುಂಬದಿಂದ ಕೂಡ ರಥವನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಬ್ರಾಹ್ಮಣ ಸಮಾಜದ ಜಿಲ್ಲಾಧ್ಯ ವೆಂಕಟೇಶ ಕುಲಕರ್ಣಿ, ಪ್ರಮುಖರಾದ ಬಸವರಾಜ ಆರ್ಯ, ಲ್ಮಕಾಂತ ಕುಲಕರ್ಣಿ, ಶಾಂತವೀರ ಯಲಾಲ್ ಭಕ್ತರು ಪಾಲ್ಗೊಂಡಿದ್ದರು.