_1780500054921.webp?w=480&auto=format%2Ccompress&fit=max)
_1780500054921.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಆರ್.ಆರ್.ನಗರ: ರಾಜ್ಯದನೂತನ ಮುಖ್ಯಮಂತ್ರಿಯಾಗಿಡಿ.ಕೆ.ಶಿವಕುಮಾರ್ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ರಾಜರಾಜೇಶ್ವರಿನಗರವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಕಾಂಗ್ರೆಸ್ ಕಾರ್ಯಕರ್ತರು,ಅಭಿಮಾನಿಗಳುಪಟಾಕಿ ಸಿಡಿಸಿ ,ಸಿಹಿಹಂಚಿ,ವಿವಿಧಜನಪದ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿವಿಜಯೋತ್ಸವ ಆಚರಿಸಿದರು.
ಮಾಗಡಿರಸ್ತೆಯ ಸುಮ್ಮನಹಳ್ಳಿ ಸರ್ಕಲ್‌ನಲ್ಲಿಡಿ.ಕೆ.ಶಿವಕುಮಾರ್ಅವರ 100 ಅಡಿಕಟೌಟ್ ನಿಲ್ಲಿಸಿ ವಿವಿಧ ಹೂವುಗಳಿಂದಶೃಂಗಾರಿಸಲಾಗಿತ್ತು.ಬೃಹತ್ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ನೇರವಾಗಿ ಪ್ರಮಾಣ ವಚನ ಸಮಾರಂಭ ವೀಕ್ಷಿಸಲುಕೆಪಿಸಿಸಿ ವಕ್ತಾರೆ ಎಚ್.ಕುಸುಮಾಅಲ್ಲಲ್ಲಿ ವ್ಯವಸ್ಥೆ ಮಾಡಿದ್ದರು.ನೂರಾರು ನಾಗರೀಕರುಪ್ರಮಾಣ ವಚನ ಸ್ವೀಕರಿಸುವುದನ್ನುವೀಕ್ಷಿಸಿದರು.
ಈ ವೇಳೆಮಾತನಾಡಿದ ಕುಸುಮಾ,ಬಡವರು,ಶ್ರಮಿಕರು,ಕಾರ್ಮಿಕರ,ರೈತರ ಸಮಸ್ಯೆ,ನೋವು ನಲಿವನ್ನುಕಂಡಿರುವ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ರಾಜ್ಯವನ್ನು ಅಭಿವೃದ್ದಿಯತ್ತಕೊಂಡೊಯುವ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಮುಖಂಡರಾದ ಕೊಟ್ಟಿಗೆಪಾಳ್ಯಎನ್.ಶೇಖರ್,ಬೆಂಗಳೂರು ಪಶ್ಚಿಮಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಹನುಮಂತರಾಯಪ್ಪ,ಲಗ್ಗೆರೆಪಾಲಿಕೆ ಮಾಜಿ ಸದಸ್ಯೆ ರೂಪಲಿಂಗೇಶ್ವರ್, ಸ್ಥಳೀಯ ಮುಖಂಡರಾದಕೆ.ಗಿರೀಶ್‌ಗೌಡ,ರಮೇಶ್‌ಗೌಡ,ಮುರಳಿ ಪ್ರೇಮ್,ಎಲ್.ಪ್ರವೀಣ್ಕುಮಾರ್,ಎನ್.ಎಸ್.ಯು.ಐ.ಆರ್‌ಆರ್‌ನಗರಕ್ಷೇತ್ರದ ಅಧ್ಯಕ್ಷ ಚರಣ್‌ಗೌಡ,ವಾರ್ಡ್ ಅಧ್ಯಕ್ಷಚೇತನ್ ಮತ್ತಿತರರಿದ್ದರು.