ಜಗದ್ಗುರುಗಳ ಕಂಚಿನ ಪ್ರತಿಮೆಯ ಅದ್ದೂರಿ ಮೆರವಣಿಗೆ

Photo
Photo
Published on
ಕಲಬುರಗಿ: ಜಗದ್ಗುರು ಶ್ರೀ ರೇಣುಕಾಚಾರ್ಯರವರ ಜಯಂತಿ ಅಂಗವಾಗಿ ಭಾನುವಾರ ಬೆಳಗ್ಗೆ ನಗರದ ಚೌಕ ಪೊಲೀಸ್ ಠಾಣೆಯಿಂದ ಡಾ.ಎಸ್‌.ಎಂ ಪಂಡಿತ ರಂಗಮಂದಿರವರೆಗೆ ನಡೆದ ಅದ್ದೂರಿ ಮೆರವಣಿಗೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಶಿವಕಾಂತ್ ಮಹಾಜನ, ಶರಣು ಮೋದಿ, ಬಸವರಾಜ್ ಮಠಪತಿ, ಜ್ಯೋತಿ ಹಿರೇಮಠ್ ಸೇರಿ ಅನೇಕರು ಚಾಲನೆ ನೀಡಿದರು.
8 ಅಡಿ ಎತ್ತರದ ರೇಣುಕಾಚಾರ್ಯರ ಕಂಚಿನ ಮೂರ್ತಿಯ ಭವ್ಯ ಮೆರವಣಿಗೆಯ ವೇಳೆ 1008 ಮುತ್ತೈದೆಯರ ಕುಂಭ ಮೇಳ, ಪುರವಂತರು ಹಾಗೂ ವಿವಿಧ ಕಲಾತಂಡಗಳು ಭಾಗಿಯಾಗಿ ಮೆರುಗು ನೀಡಿದವು. ಬಳಿಕ 1008 ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net