

ಪ್ರಮುಖ ಮುಖ್ಯಾಂಶಗಳು
ಈ ವರ್ಷ ಪರಿಷೆಯನ್ನು ಐದು ದಿನಗಳಿಗೆ ವಿಸ್ತರಿಸಲಾಗಿದೆ. 5 ರಾಸುಗಳನ್ನು ತಂದು ವಿಶೇಷವಾಗಿ ಪೂಜೆ ಸಲ್ಲಿಸಲಾಗಿದೆ. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ಲಾಸ್ಟಿಕ್‌ಮುಕ್ತ ಪರಿಷೆಗೆ ಕ್ರಮ ವಹಿಸಲಾಗಿದ್ದು, ಕಳೆದ ಆಗಸ್ಟ್‌ನಿಂದಲೇ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಇನ್ನುಮುಂದೆ ಪರಿಷೆಯನ್ನು ಮೈಸೂರು ದಸರಾ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.
ಪರಿಷೆಗೆ ಲಕ್ಷಾಂತರ ಜನರು ಸೇರುತ್ತಾರೆ. ಬೆಂಗಳೂರು ಆಧುನಿಕವಾಗಿ ಬೆಳೆಯುತ್ತಿರುವುದರ ನಡುವೆ 400-500 ವರ್ಷಗಳ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಪರಿಷೆ ನಿದರ್ಶನ. ಇಂತಹ ಪರಿಷೆಗೆ ಮಕ್ಕಳನ್ನು ಕರೆತಂದು ನಮ್ಮ ಪರಂಪರೆ ತಿಳಿಸಿ, ಗ್ರಾಮೀಣ ಸೊಗಡನ್ನು ಅನುಭವಿಸಲು ಅನುವುಮಾಡಿಕೊಡಿ.