ಜೈಘೋ ಷಗಳ ಮಧ್ಯೆ ಅದ್ದೂರಿ ರಥೋತ್ಸವ

ಬಸವಕಲ್ಯಾಣದ ಶ್ರೀ ಮಲ್ಲಿಕಾರ್ಜುನ ಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಡಾ.ಮಹೇಶ ಪಾಟೀಲ್​, ನಾಗೇಶ ಸಂಗೊಳಗೆ, ಸೂರ್ಯಕಾಂತ ನಾಸೆ, ಉಮೇಶ ಕೆವಟಗೆ, ದೀಪಕ ಅಗ್ರೆ, ಚನ್ನು ಸಂಗೊಳಗೆ ಇತರರಿದ್ದರು.
ಬಸವಕಲ್ಯಾಣದ ಶ್ರೀ ಮಲ್ಲಿಕಾರ್ಜುನ ಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಡಾ.ಮಹೇಶ ಪಾಟೀಲ್​, ನಾಗೇಶ ಸಂಗೊಳಗೆ, ಸೂರ್ಯಕಾಂತ ನಾಸೆ, ಉಮೇಶ ಕೆವಟಗೆ, ದೀಪಕ ಅಗ್ರೆ, ಚನ್ನು ಸಂಗೊಳಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೋತ್ಸವ
ಬಸವಕಲ್ಯಾಣ
ನಗರದ ಮಲ್ಲಿಕಾರ್ಜುನ ಓಣಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆ ನಿಮಿತ್ತ ಶುಕ್ರವಾರ ಮಧ್ಯೆ ರಾತ್ರಿ ಭಕ್ತರ ಜೈೂಷಗಳ ಮಧ್ಯೆ ಅದ್ದೂರಿಯ ರಥೊತ್ಸವ ಜರುಗಿತು.
ಬಿಡಿವಿಎಸ್​ ಅಧ್ಯಕ್ಷ ಶಶಿಕಾಂತ ದುರ್ಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಗರದ ವಿವಿಧ ಓಣಿ&ಬಡಾವಣೆಯಿಂದ ಆಗಮಿಸಿದ ಭಕ್ತರು ಭಕ್ತಿ ಶೃದ್ದೆಯಿಂದ ಭಾಗವಹಿಸಿದ್ದರು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಕೋಟೆ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತದವರೆಗೆ ಪಲ್ಲಕ್ಕಿ, ನಂದಿಧ್ವಜಗಳ ಮೆರವಣಿಗೆ ಸಾಂಸತಿಕ ವೈಭವದೊಂದಿಗೆ ಜರುಗಿತು. ಇಲ್ಲಿಂದ ಮರಳಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲುಪಿದ ನಂತರ ರಥೋತ್ಸವ ಜರುಗಿತು. ಬಳಿಕ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಅಲಂಕೃತದ ವಾಹನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ(ಶಿವನ) ಮೂರ್ತಿಯೊಂದಿಗೆ ನಡೆದ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆಯಲ್ಲಿ ಡೊಳ್ಳು, ಮಹಿಳಾ ಕೋಲಾಟ, ವೀರಗಾಸೆ ಕುಣಿತ, ಭಜನೆ ಸೇರಿ ಕಲಾ ತಂಡಗಳಿಂದ ನಡೆದ ಪ್ರದರ್ಶನ ಗಮನ ಸೆಳೆಯಿತು. ಬಾಲಕರು ತಲೆಗೆ ರೂಮಾಲು ಸುತ್ತಿ, ಬಿಳಿ ಸಮವಸ ಧರಿಸಿ ನಂದಿ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಜಾತ್ರಾ ಸಮಿತಿ ಅಧ್ಯಕ್ಷ ನಾಗಣ್ಣ ಸಂಗೋಳಗೆ ಉಪಾಧ್ಯಕ್ಷ ಸೂರ್ಯಕಾಂತ ನಾಸೆ, ಮಂಜುನಾಥ ಗುರವ, ದೀಪಕ ಅಗ್ರೆ, ಸಿದ್ದರಾಮ ನಾಸೆ, ಉಮೇಶ ಕೆವಟಗಿ, ಚನ್ನವಿರ ಸಂಗೋಳಗೆ, ಚನ್ನು ಪಾಟೀಲ್​, ಭದ್ರು ಅಂಧೇಲಿ, ಚನ್ನಪ್ಪ ರಾಜಪುರೆ, ಸಂಗಮೇಶ ದುರ್ಗೆ, ಸಂಗಮೇಶ ಅವಸೆ, ಸಂತೋಷ ಚಪಾತೆ, ಸೋಮನಾಥ ಸಂಗೊಳಗೆ, ನಾಗೇಶ ಮಂಠಾಳೆ, ಚಂದ್ರಕಾಂತ ಧುಮ್ಮನಸೂರೆ, ಸಿದ್ರಾಮ ಅಗ್ರೆ, ಅಭಿಷೇಕ ದುರ್ಗೆ, ಸಚಿನ್​ ಚಡಮುಡೆ, ಶಿವಕುಮಾರ ಅಗ್ರೆ, ಸಂಜು ಹಾರಕುಡೆ, ಗುರುನಾಥ ದುರ್ಗೆ, ಮಹೇಶ ದುರ್ಗೆ, ರಂಜಿತ ಪಾಟೀಲ್​, ಆಕಾಶ, ಅರುಣಕುಮಾರ ಶಿವಕುಮಾರ, ಅಮರ ಭಾಗವಹಿಸಿದ್ದರು.
ಜಾತ್ರೆಗಳು ಸಾಮರಸ್ಯ ಗಟ್ಟಿಗೊಳಿಸಲು ಸಹಕಾರಿ
ಎಲ್ಲರೂ ಒಂದಾಗಿ ಭಕ್ತಿ&ಶೃದ್ಧೆಯಿಂದ ಅಚರಿಸುವ ಜಾತ್ರೆಗಳನ್ನು ಸಮಾಜದಲ್ಲಿ ಸಾಮರಸ್ಯ ಗಟ್ಟಿಗೊಳಿಸಲು ಸಹಕಾರಿಯಾಗುತ್ತವೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ನುಡಿದರು. ಜಾತ್ರೆ ನಿಮಿತ್ತ ಬುಧವಾರ ಸಂಜೆ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ವಾಣಿಜ್ಯ ತೆರಿಗೆ ಸಹಾಯಕ ನಿರ್ದೇಶಕ ಡಾ.ಮಹೇಶ ಪಾಟೀಲ್​ ಮಾತನಾಡಿದರು. ನಾಗೇಶ ಸಂಗೊಳಗೆ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net