ಮಾಜಿ ಸಂಸದ ಎಸ್.ಮುನಿಸ್ವಾಮಿ ಸಂಸದರಾಗಿದ್ದಾಗ ತಮ್ಮ ಅನುದಾನದಲ್ಲಿ ಕ್ಷೇತ್ರದಾದ್ಯಂತ ನಿಮಾರ್ಣ ಮಾಡಿರುವ ಬಸ್ ತಂಗುದಾಣಗಳು ತೀವ್ರ ಕಳಪೆಯಿಂದ ಕೂಡಿದೆ ಎಂಬುದಕ್ಕೆ ಈ ತಂಗುದಾಣವೇ ಸಾಕ್ಷಿಯಾಗಿದೆ. ವರ್ಷ ಪೂರೈಸುವ ಮೊದಲೇ ತಂಗುದಾಣ ಶಿಥಿಲವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲ ಆಗಿದೆ. ತಂಗುದಾಣದ ಅಳತೆ ಮತ್ತು ಸ್ವರೂಪ ಗಮನಿಸಿದರೆ ಅಸಲಿಗೆ 1 ಲಕ್ಷ ರೂ. ಸಹ ವೆಚ್ಚವಾಗುವುದಿಲ್ಲ. ಆದರೆ, 5 ಲಕ್ಷ ರೂ. ವೆಚ್ಚವಾಗಿರುವಂತೆ ತೋರಿಸಿದ್ದಾರೆ. ತಂಗುದಾಣವಾದರೂ ಸೂಕ್ತವಾಗಿದೆಯೇ ಎಂದರೆ ಅದೂ ಸರಿಯಿಲ್ಲ.