ದೇಗುಲದಲ್ಲಿ ಬೆಳಗ್ಗೆ ದೇವಿಯ ಮೂರ್ತಿಗೆ ವಿವಿಧ ಅಭಿಷೇಕವನ್ನು ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ವಿವಿಧ ಬಡಾವಣೆಗಳಿಂದ ತಂಪುಜ್ಯೋತಿಯನ್ನು ಹೊತ್ತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಆಯಾ ಸಮುದಾಯದ ಯಜಮಾನರ ಸಮ್ಮುಖದಲ್ಲಿ ವಾದ್ಯ ಮೇಳದೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ದೇಗುಲಕ್ಕೆ ತೆರಳಿ ತಂಪುಜ್ಯೋತಿಯನ್ನು ಸಮರ್ಪಿಸಿ ಭಕ್ತಿ ಭಾವ ಮೆರೆದರು. ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.