ಹೋರಾಟದ ಹಾದಿ: ಕಳೆದ 2020ರ ಸೆ.14ರಂದು "ವಿಜಯವಾಣಿ' ದಿನಪತ್ರಿಕೆಯಲ್ಲಿ ಪ್ರಕಟವಾದ "ನನಸಾಗದ ಪಟ್ಟಣ ಪಂಚಾಯಿತಿ ಕನಸು' ಎಂಬ ವರದಿ ಬಳಿಕ ಎಚ್ಚೆತ್ತ ಗ್ರಾಮಸ್ಥರು, ಸತತ ಎರಡು ವರ್ಷಗಳ ಕಾಲ ಹೋರಾಟ ನಡೆಸಿದ್ದರು. ಮೂರು ಬಾರಿ ಗ್ರಾಪಂ ಚುನಾವಣೆ ಬಹಿಷ್ಕರಿಸಿ ಪಟ್ಟು ಹಿಡಿದಿದ್ದರು. ಇದರ ಫಲವಾಗಿ, ಹಾಲಿ ಶಾಸಕರ ಭರವಸೆಯಂತೆ ಎರಡು ತಿಂಗಳ ಹಿಂದಷ್ಟೇ ಸರ್ಕಾರ ತ್ಯಾಮಗೊಂಡ್ಲುವನ್ನು ಪಟ್ಟಣ ಪಂಚಾಯಿತಿ ಎಂದು ೂಷಿಸಿ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಿತ್ತು. ಒಂದೆಡೆ ನಗರಾಭಿವೃದ್ಧಿ ಇಲಾಖೆ ತ್ಯಾಮಗೊಂಡ್ಲುವನ್ನು ಪಪಂ ಎಂದು ಘೋಷಿಸಿದ್ದರೆ, ಇನ್ನೊಂದೆಡೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ರ್ನಿಣಯ ಆಯೋಗವು ಇತ್ತೀಚೆಗೆ ಪ್ರಕಟಿಸಿದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ತ್ಯಾಮಗೊಂಡ್ಲುವನ್ನು ಇನ್ನೂ 'ಗ್ರಾಮೀಣ' ಕ್ಷೇತ್ರವಾಗಿಯೇ ಪರಿಗಣಿಸಿದೆ. ಜ.21ರಂದು ಹೊರಬಿದ್ದ ಆಯೋಗದ ವರದಿಯಲ್ಲಿ ತ್ಯಾಮಗೊಂಡ್ಲುವನ್ನು ಜಿಪಂ ಮತ್ತು ತಾಪಂ ಕ್ಷೇತ್ರವನ್ನಾಗಿ ತೋರಿಸಿರುವುದು ತಾಂತ್ರಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.