ಭಕ್ತನಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ / NELAMANGAL

ನಾಟಿ ಕೋಳಿ ಬಾಡೂಟ ಮುಗಿಬಿದ್ದ ಜನರು
ನಾಟಿ ಕೋಳಿ ಬಾಡೂಟ ಮುಗಿಬಿದ್ದ ಜನರು
Published on
ನೆಲಮಂಗಲ : ಕರ್ನಾಟಕದ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಯಶಸ್ವಿಯಾಗಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ನೆಲಮಂಗಲದ ನಗರಸಭೆ ವ್ಯಾಪ್ತಿಯ ಭಕ್ತನಪಾಳ್ಯದಲ್ಲಿ ಅಹಿಂದ ಯುವ ಒಕ್ಕೂಟ ನೇತೃತ್ವದಲ್ಲಿ ಮಂಗಳವಾರ 5 ಸಾವಿರಕ್ಕೂ ಹೆಚ್ಚು ಮಂದಿಗೆ ನಾಟಿ ಕೋಳಿ ಔತಣಕೂಟ ಆಯೋಜಿಸಲಾಗಿತ್ತು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಮಾತನಾಡಿ, ಮಾಜಿ ಸಿಎಂ ದೇವರಾಜು ಅರಸು ಅವರ ರೀತಿಯಲ್ಲೇ ಸಿಎಂ ಸಿದ್ದರಾಮಯ್ಯ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಶಾಸಕ ಎನ್​.ಶ್ರೀನಿವಾಸ್​ ಮಾತನಾಡಿ, ಹೆಚ್ಚು ಅವಧಿಯ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ರಾಜ್ಯದ ಇತಿಹಾಸ ಪುಟದಲ್ಲಿ ಸೇರಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಆಸ್ತಿಯಾಗಿದ್ದು, ಸುಮಾರು 16 ಬಜೆಟ್​ ಮಂಡಿಸಿದ್ದಾರೆ. ಮುಖ್ಯಮಂತ್ರಿಗಳು ನನ್ನ ಕ್ಷೇತ್ರದ ಅಭಿವೃದ್ಧಿಗೂ 1 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಅಭಿಮಾನಿಗಳು ಬಾಡೂಟ ಆಯೋಜನೆ ಮಾಡಿರುವುದು ಸಂತಸದ ಸಂಗತಿ ಎಂದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ರಾಜ್​ ಮೌರ್ಯ, ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ಬ್ರಿಜೇಶ್​ ಕಾಳಪ್ಪ, ಇನ್​ಸೈಡ್​ ಸಂಸ್ಥೆ ಸಂಸ್ಥಾಪಕ ವಿನಯ್​ಕುಮಾರ್​ ಸಾಯಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ನಾಗೇಂದ್ರ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಸದಸ್ಯ ಸಿ.ಪ್ರದಿಪ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ಟಿಎಪಿಸಿಎಂಎಸ್​ ನಿರ್ದೇಶಕ ನರಸಿಂಹಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡ ಭಕ್ತನಪಾಳ್ಯ ಮುನಿರಾಜು, ಖಲೀಂ ಉಲ್ಲಾ, ಬಿ.ಡಿ.ಗಂಗಾಧರ್​, ಕಲ್ಯಾಣ್​ಕುಮಾರ್​, ನಾಗರಾಜು, ಶಶಿರಾಜ್​, ಮಹಾಲಿಂಗಪ್ಪ, ರೇವಣ್ಣ, ರಾಜಣ್ಣ, ನರಸಿಂಹಮೂರ್ತಿ, ಜಗದೀಶ್​, ಶಿವಕುಮಾರ್​ ಇದ್ದರು.
ಮುಗಿಬಿದ್ದ ಜನರು : ನಾಟಿ ಕೋಳಿ ಬಾಡೂಟ ಆಯೋಜನೆ ಮಾಡಿದ್ದರಿಂದ ಸಾಕಷ್ಟು ಮಂದಿ ಜಮಾಯಿಸಿದ್ದು, ಏಕಾಕಾಲಕ್ಕೆ ಊಟ ಆರಂಭಿಸಿದ ಕಾರಣ ಜನ ಮುಗಿಬಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net