ಶೋಷಣೆಮುಕ್ತ ಸಮಾಜಕ್ಕೆ ವರದಾನ / NELAMANGAL

ನೆಲಮಂಗಲದ ಡಾ.ಅಂಬೇಡ್ಕರ್​ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​, ತಾಪಂ ಕಾರ್ಯನಿರ್ವಾಣಾಧಿಕಾರಿ ಡಾ.ಬಿಂದು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್​, ನಗರಸಭೆ ಪೌರಾಯುಕ್ತ ಗಂಗಾಧರ್​ ಇದ್ದರು.
ನೆಲಮಂಗಲದ ಡಾ.ಅಂಬೇಡ್ಕರ್​ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​, ತಾಪಂ ಕಾರ್ಯನಿರ್ವಾಣಾಧಿಕಾರಿ ಡಾ.ಬಿಂದು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್​, ನಗರಸಭೆ ಪೌರಾಯುಕ್ತ ಗಂಗಾಧರ್​ ಇದ್ದರು.
Published on
ನೆಲಮಂಗಲ : ಸಮಾನತೆಯ ಆಧಾರದಲ್ಲಿ ಸರ್ವರ ಏಳಿಗೆಗೆ ನೆರವಾಗುವ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಕ್ಕಿಂತ ಶ್ರೇಷ್ಠ ಎಂದು ತಹಸೀಲ್ದಾರ್​ ಮಲ್ಲೇಶ್​ಬೀರಪ್ಪ ಪೂಜಾರ್​ ತಿಳಿಸಿದರು.
ನಗರದ ಡಾ.ಅಂಬೇಡ್ಕರ್​ ಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಾತ್ಯತಿತ ರಾಷ್ಟ್ರದಲ್ಲಿ ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ. ಡಾ.ಅಂಬೇಡ್ಕರ್​ ಅವರು ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ರಚಿಸಿದ್ದು, ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ನೀಡಿದ್ದಾರೆ. ನೋವು, ಅವಮಾನ, ಶೋಷಣೆ ಹಾಗೂ ಅಂದಕಾರ ಮುಕ್ತ ಸಮಾಜಕ್ಕೆ ಸಂವಿಧಾನ ವರದಾನವಾಗಿದೆ ಎಂದರು.
ಸಂವಿಧಾನದ ಮೂಲ ಹಕ್ಕು ಮತ್ತು ಕರ್ತವ್ಯ ಎಲ್ಲರೂ ಪಾಲಿಸಿ ಗೌರವಿಸಬೇಕು. ಮಕ್ಕಳು, ವಿದ್ಯಾರ್ಥಿಗಳು ಅಂಬೇಡ್ಕರ್​ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
ಉಪನ್ಯಾಸಕಿ ಸುಮನಾ ಮಾತನಾಡಿ, ಆರ್ಥಿಕ, ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣದ ಹಕ್ಕು ಸೇರಿ ಸರ್ವರಿಗೂ ಸಮಬಾಳು, ಸಮಪಾಲನ್ನು ಸಂವಿಧಾನ ನೀಡಿದೆ ಎಂದರು.
ನೆ.ಯೋ.ಪ್ರಾಧಿಕಾರ ಸದಸ್ಯ ಬಿನ್ನಮಂಗಲ ವೆಂಕಟೇಶ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ವ್ಯವಸ್ಥಾಪಕ ಮಂಜುನಾಥ್​, ಸಿಬ್ಬಂದಿ ಚಂದ್ರಶೇಖರ್​, ಶಿಕ್ಷಕ ರೇಣುಕಸ್ವಾಮಿ, ಸಾಹಿತಿ ಎನ್​.ಆರ್​.ನಾಗರಾಜು, ಮುಖಂಡ ಮುನಿಯಪ್ಪ, ಸಿ.ಎಚ್​.ಸಿದ್ದಯ್ಯ, ರಾಮಾಂಜಿನಪ್ಪ, ನಿಡವಂದರಾಜು ಇದ್ದರು.
ಅದ್ದೂರಿ ಜಾಥಾ : ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡ ವಿವಿಧ ಇಲಾಖೆ ಅಧಿಕಾರಿಗಳು, ದಲಿತಪರ ಸಂಘಟನೆ ಮುಖಂಡರು ಹಾಗೂ ಶಾಲಾ ಮಕ್ಕಳು ನಗರ ಮುಖ್ಯ ರಸ್ತೆ ಮೂಲಕ ಡಾ.ಅಂಬೇಡ್ಕರ್​ ಭವನದವರೆಗೂ ಅದ್ದೂರಿ ಜಾಥಾ ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಾಗೂ ಸಂವಿಧಾನ ದಿನ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net