ಇದರಿಂದಾಗಿ ನದಿ ಪಾತ್ರದಲ್ಲಿನ ನೀರು ಕಡಿತಗೊಳಿಸುವ ತಜ್ಞರ ನಿರ್ಧಾರವನ್ನು ಕೈಬಿಟ್ಟಿದ್ದು ನದಿ ಪಾತ್ರದ ಜನತೆ ನಿರಾಳವಾಗಿದ್ದಾರೆ. ಸದ್ಯ 8ನೇ ಪಿಲ್ಲರ್‌ನ ಮೇಲಿನ ಸಿಮೆಂಟ್ ಕಾಂಕ್ರೀಟ್ ಹಾಕಿದ ಬಳಿಕ 7ನೇ ಪಿಲ್ಲರ್‌ನ ಬುನಾದಿ ಭದ್ರತೆ ಬಗ್ಗೆ ಅಭಿಯಂತರು ಖಾತ್ರಿ ಪಡಿಸಿಕೊಳ್ಳಲಿದ್ದು, ಎರಡು ದಿನಗಳಲ್ಲಿ ಇದೇ ರೀತಿಯಲ್ಲಿ ಪಿಲ್ಲರ್ ಅಳವಡಿಕೆ ಆರಂಭಗೊಳ್ಳಲಿದ್ದು, ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.