87ನಿವೃತ್ತ ಬಿಎಂಟಿಸಿ ನೌಕರರಿಗೆ ಸನ್ಮಾನ

ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 87 ನೌಕರರನ್ನು ಅಧ್ಯಕ್ಷ ವಿ.ಎಸ್.ಆರಾಧ್ಯ ಸನ್ಮಾನಿಸಿದರು. ಎಂಡಿ ಕೆ.ಬಿ.ಶಿವಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 87 ನೌಕರರನ್ನು ಅಧ್ಯಕ್ಷ ವಿ.ಎಸ್.ಆರಾಧ್ಯ ಸನ್ಮಾನಿಸಿದರು. ಎಂಡಿ ಕೆ.ಬಿ.ಶಿವಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 87ನಿವೃತ್ತ ಬಿಎಂಟಿಸಿ ನೌಕರರಿಗೆ ಸನ್ಮಾನ
  • ಮೇ 31ರಂದು 60 ವರ್ಷ ಪೂರ್ಣಗೊಳಿಸಿ ನಿವೃತ್ತರಾಗಿದ್ದರು
  • ಬಿಎಂಟಿಸಿ ಸಂಸ್ಥೆಗೆ ಈವರೆಗೆ 156 ಪ್ರಶಸ್ತಿ ಬಂದಿವೆ

ಬೆಂಗಳೂರು: ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ವತಿಯಿಂದ 2026ನೇಸಾಲಿನಲ್ಲಿ ಸೇವೆಯಿಂದ ನಿವೃತ್ತಿಯಾಗಿರುವಅಧಿಕಾರಿ ಹಾಗೂ ಸಿಬ್ಬಂದಿಗಳನ್ನುಸನ್ಮಾನಿಸಲಾಯಿತು.

7ನೇಡಿಪೋ ಆವರಣದಲ್ಲಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ಬಿಎಂಟಿಸಿಅಧ್ಯಕ್ಷ ವಿ.ಎಸ್.ಆರಾಧ್ಯ ಹಾಗೂವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್ನಿವೃತ್ತ ಅಧಿಕಾರಿ ಹಾಗೂಸಿಬ್ಬಂದಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿಸಂಸ್ಥೆಯ ಮುಖ್ಯ ವಿಭಾಗಾಧಿಕಾರಿಗಳು,ಅಧಿಕಾರಿಗಳು,ಸಿಬ್ಬಂದಿ ಹಾಗೂನಿವೃತ್ತ ನೌಕರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿಮಾತನಾಡಿದ ಬಿಎಂಟಿಸಿ ಅಧ್ಯಕ್ಷವಿ.ಎಸ್.ಆರಾಧ್ಯ,ಸಂಸ್ಥೆಯಅಭಿವೃದ್ಧಿ,ಸಾರ್ವಜನಿಕರವಿಶ್ವಾಸ ಗಳಿಕೆ ಹಾಗೂ ಗುಣಮಟ್ಟದಸಾರಿಗೆ ಸೇವೆ ಒದಗಿಸುವಲ್ಲಿನಿವೃತ್ತ ನೌಕರರ ಶ್ರಮ,ಸಮರ್ಪಣೆ ಮತ್ತುನಿಷ್ಠೆ ಮಹತ್ವದ ಪಾತ್ರ ವಹಿಸಿದೆ.ಅವರ ನಿವೃತ್ತಜೀವನದ ಹೊಸ ಅಧ್ಯಾಯ ಆರಂಭವಾಗಿದ್ದು,ಆರೋಗ್ಯ ಹಾಗೂನೆಮ್ಮದಿಯ ಜೀವನವನ್ನು ನಡೆಸಲಿಎಂದು ಶುಭ ಹಾರೈಸಿದರು.

2026ನೇಸಾಲಿನಲ್ಲಿ ಬಿಎಂಟಿಸಿಯಲ್ಲಿಒಟ್ಟು 438 ಅಧಿಕಾರಿಹಾಗೂ ಸಿಬ್ಬಂದಿಗಳು ನಿವೃತ್ತಿಯಾಗಲಿದ್ದು,ಇದರಲ್ಲಿ 426ಸಿಬ್ಬಂದಿ ಮತ್ತು12 ಅಧಿಕಾರಿಗಳುಸೇರಿದ್ದಾರೆ.ಮೇ 31ರಂದು 60 ವರ್ಷಪೂರ್ಣಗೊಳಿಸಿ ನಿವೃತ್ತರಾಗಿರುವ87 ಅಧಿಕಾರಿಹಾಗೂ ಸಿಬ್ಬಂದಿಗಳನ್ನು ಈಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯು ನೌಕರರ ಕಲ್ಯಾಣಕ್ಕಾಗಿ ವೇತನ ಪರಿಷ್ಕರಣೆ ಬಾಕಿ ಪಾವತಿ, ಅಪಘಾತ ಹಾಗೂ ಮರಣ ಪ್ರಕರಣಗಳಿಗೆ ವಿಮಾ ಪರಿಹಾರ, ಉಚಿತ ಹೃದಯ ಮತ್ತು ಶ್ವಾಸಕೋಶ ಆರೋಗ್ಯ ತಪಾಸಣೆ, ನೇರ ನೇಮಕಾತಿ ಹಾಗೂ ಮೃತಾವಲಂಬಿತರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಸಂಸ್ಥೆಗೆ ಈ ವರೆಗೆ ಒಟ್ಟು 156 ಪ್ರಶಸ್ತಿ ಹಾಗೂ ಮಾನ್ಯತೆ ಲಭಿಸಿದೆ.

— ಕೆ.ಬಿ.ಶಿವಕುಮಾರ್, ಬಿಎಂಟಿಸಿ ಎಂಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net