ಗೋಪಿ ಹತ್ಯೆ ಕೇಸಲ್ಲಿ ಮತ್ತೆ 8 ಮಂದಿ ಬಂಧನ / ANEKAL

ಆನೇಕಲ್​ ರಿಯಲ್​ ಎಸ್ಟೇಟ್​ ಏಜೆಂಟ್​ ಗೋಪಿ ಹತ್ಯೆ ಪ್ರಕರಣದ ಎಂಟು ಆರೋಪಿಗಳನ್ನು ಮೆಡಿಕಲ್​ ಚೆಕಪ್​ಗಾಗಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.
ಆನೇಕಲ್​ ರಿಯಲ್​ ಎಸ್ಟೇಟ್​ ಏಜೆಂಟ್​ ಗೋಪಿ ಹತ್ಯೆ ಪ್ರಕರಣದ ಎಂಟು ಆರೋಪಿಗಳನ್ನು ಮೆಡಿಕಲ್​ ಚೆಕಪ್​ಗಾಗಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.
Published on
ಆನೇಕಲ್​ : ಆನೇಕಲ್​ನಲ್ಲಿ ರಿಯಲ್​ ಎಸ್ಟೇಟ್​ ಏಜೆಂಟ್​ ಗೋಪಿ ಹತ್ಯೆ ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹೊನ್ನ ಕಳಸಾಪುರದ ಮೋಹನ್​ ಬಾಬು(38), ಆನಂದ(42) ಅತ್ತಿಬೆಲೆ ಹೋಬಳಿ ಹೊಸೂರು ಗ್ರಾಮದ ತೇಜಸ್​ (26), ಆನೇಕಲ್​ ಬಹದ್ದೂರ್​ ಪುರದ ದರ್ಶನ್​ (22), ಸರ್ಜಾಪುರ ಹೋಬಳಿಯ ಚಿಂತಲ ಮಡಿವಾಳ ಗ್ರಾಮದ ನಿಖಿಲ್​ (22), ಅತ್ತಿಬೆಲೆ ಹೋಬಳಿಯ ಪಟಾಲಮ್ಮ ದೇವಸ್ಥಾನ ಸಮೀಪದ ನಿವಾಸಿ ಪ್ರಶಾಂತ್​ (24), ಹುಸ್ಕೂರು ಹಣ್ಣಿನ ಮಾರುಕಟ್ಟೆ, ಗಾಣಿಗರ ಬೀದಿಯ ಕಾನೂನು ಸಂರ್ಷಕ್ಕೆ ಒಳಗಾದ 17 ವರ್ಷದ ಇಬ್ಬರು ಬಂಧಿತರು.
ಇನ್ನೂ ಮೂವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ತಮಿಳುನಾಡಿನ ಹೊಗೇನಕಲ್​ ಕಾಡಿನಲ್ಲಿ ಪೊಲೀಸರಿಗೆ ಕಾಣಿಸಿಕೊಂಡಾಗ ಪರಾರಿ ಆಗಲು ಯತ್ನಿಸಿದ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಲು ತೀರ್ಮಾನಿಸಿದ್ದರು. ಆದರೆ, ಆರೋಪಿಗಳನ್ನು ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಗ್ಗೆ ಆರೋಪಿಗಳಿಗೆ ಆನೇಕಲ್​ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್​ ಚೆಕಪ್​ ಮಾಡಿಸಲಾಗಿದೆ. ನಂತರ ಸಿಐಡಿ, ಎಸ್​ಪಿ ಹಾಗೂ ತಂಡ, ಆನೇಕಲ್​ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಗೋಪಿ ಕೊಲೆ ಮಾಡಲು ಕಳೆದ ಮೂರು ತಿಂಗಳಿಂದ ದುಷ್ಕರ್ಮಿಗಳು ವ್ಯವಸ್ಥಿತ ಸಂಚು ರೂಪಿರುವುದು ಪ್ರಾಥಮಿಕವಾಗಿ ತನಿಖೆಯಲ್ಲಿ ಗೊತ್ತಾಗಿದೆ. ಆನೇಕಲ್​ ಪುರಸಭಾ ಸದಸ್ಯ ರವಿ ಕೊಲೆ ಪ್ರಕರಣ ಆರೋಪಿ ಒಬ್ಬ ತಲೆಮರೆಸಿಕೊಂಡಿದ್ದು, ಆತನೂ ಗೋಪಿ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net