ಬನ್ನೂರಿನ ಸ್ಫೋರ್ಟ್ಸ ಕ್ಲಬ್‌ನಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಕ್ಲಬ್ ಅಧ್ಯಕ್ಷ ಬಿ.ಎಂ.ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಸತೀಶ್, ಬಿ.ಎ.ರೇಣುಕಾಪ್ರಸಾದ, ಮಿಲ್‌ಮಂಜುನಾಥ್, ಅನಂತದೇವದಾಸು, ಕಿರುಗಾವಲು ಪ್ರಕಾಶ್, ವೆಂಕಟೇಶ್, ಮಂಜಣ್ಣ, ಕಂಬು, ಬಿ.ಶಿವಕುಮಾರ್, ಪಲ್ಲಲ್ಲೆ ರವಿ, ಯೋಗೇಂದ್ರ, ನಾಗೇಂದ್ರ, ರಾಮಚಂದ್ರ, ರವಿಕುಮಾರ್, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬನ್ನೂರು: ಭಾರತ ಸಂವಿಧಾನವು ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವವಾಗಿ ಅಚರಣೆ ಮಾಡುವ ಮೂಲಕ ನಮ್ಮ ದೇಶದ ಸಂವಿಧಾನಕ್ಕೆ ಗೌರವ ಸಲ್ಲಿಸಲಾಗುತ್ತದೆ ಎಂದು ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ ತಿಳಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ ಎಂದು ಹೇಳಿದರು.
ಉತ್ತಮ ಪ್ರಜೆಗಳು ಮಾತ್ರ ಉತ್ತಮ ದೇಶವನ್ನು ಕಟ್ಟಲು ಸಾಧ್ಯ. ನಾವೆಲ್ಲರೂ ಸ್ವತಂತ್ರೃಕ್ಕಾಗಿ ಬಲಿದಾನ ಮಾಡಿದ ಮಹಾನ್ ನಾಯಕರ ನೆನೆಯುತ್ತಾ ಬಲಿಷ್ಠ ಸಭಾರತ ನಿರ್ಮಾಣಕ್ಕೆ ಶ್ರಮಿಸೋಣ ಎಂದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. ರೋಟರಿ ಶಾಲಾ ಅಧ್ಯಕ್ಷ ಬಿ.ಎನ್.ಸುರೇಶ್, ಕಾರ್ಯದರ್ಶಿ ವೆಂಕಟೇಶ್‌ಪ್ರಸಾದ್, ರೋಟರಿ ಅಧ್ಯಕ್ಷ ಡಾ.ರಾಜೀವ್, ಶಿವಕುಮಾರ್, ನಂಜುಂಡಸ್ವಾಮಿ, ವಡ್ಗಲ್ಲೇಗೌಡ, ಮುಖ್ಯಶಿಕ್ಷಕಿ ರಾಧಾ, ಶಿಕ್ಷಕರು ಇದ್ದರು.