ಆಚಾರ್ಯ ಶಾಂತಿಸಾಗರ ಮುನಿಗಳ 71ನೇ ಪುಣ್ಯತಿಥಿ

ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ 71ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಆಚಾರ್ಯ ಅನೇಕಾಂತ ಸಾಗರ ಮುನಿಗಳು, ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ 71ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಆಚಾರ್ಯ ಅನೇಕಾಂತ ಸಾಗರ ಮುನಿಗಳು, ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಚಾರ್ಯ ಶಾಂತಿಸಾಗರ ಮುನಿಗಳ 71ನೇ ಪುಣ್ಯತಿಥಿ
  • ಅಹಿಂಸಾ ತತ್ವ ಪ್ರಚಾರದ ಮೂಲಕ ದೇಶವ್ಯಾಪಿ ಪ್ರಸಿದ್ಧರಾಗಿದ್ದರು
  • ಅಮೃತಶಿಲೆಯ ಶಾಂತಿಸಾಗರ ಮುನಿಗಳ ಪುತ್ಥಳಿ ಅನಾವರಣ

ಬೆಂಗಳೂರು: ಅಹಿಂಸಾತತ್ವ ಪ್ರಚಾರದ ಮೂಲಕ ದೇಶವ್ಯಾಪಿಪ್ರಸಿದ್ಧರಾಗಿದ್ದ ಆಚಾರ್ಯಶಾಂತಿಸಾಗರ ಮುನಿ ಮಹಾರಾಜರ 71ನೇಪುಣ್ಯತಿಥಿ ಕಾರ್ಯಕ್ರಮವುಬೆಂಗಳೂರಿನಲ್ಲಿ ಇತ್ತೀಚೆಗೆನಡೆಯಿತು.

ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಮಾತನಾಡಿದಆಚಾರ್ಯ ಅನೇಕಾಂತ ಸಾಗರ ಮುನಿಗಳು,ಚಾರಿತ್ರ ಚಕ್ರವರ್ತಿಶಾಂತಿಸಾಗರ ಮುನಿಗಳು ಜನರಿಗೆಮೋಹ ಮಾರ್ಗವನ್ನು ತೊರೆದು ಮೋಕ್ಷಮಾರ್ಗವನ್ನು ಕಾಣುವ ಸರಳ ದಾರಿತೋರಿದ್ದರು. ಆಮೂಲಕ ಸಂಸಾರದಲ್ಲಿ ಬದುಕನ್ನುನೋಡುವ ಧೃಷ್ಠಿಕೋನವನ್ನುಬದಲಿಸಿದ್ದರು ಎಂದು ವಿವರಿಸಿದರು.

ತ್ಯಾಗಿಸೇವಾ ಸಮಿತಿ,ಚಕ್ರೇಶ್ವರಿಮಹಿಳಾ ಸಮಾಜ ಹಾಗೂ ಕರ್ನಾಟಕ ಜೈನಅಸೋಸಿಯೇಷನ್ ಕರ್ನಾಟಕ ಜೈನಭವನದಲ್ಲಿ ಜಂಟಿಯಾಗಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಅಮೃತಶಿಲೆಯಶಾಂತಿಸಾಗರ ಮುನಿಗಳ ಪುತ್ಥಳಿಅನಾವರಣ ಮಾಡಲಾಯಿತು.

ಈ ವೇಳೆಮಾತನಾಡಿದ ತ್ಯಾಗಿ ಸೇವಾ ಸಮಿತಿಅಧ್ಯಕ್ಷ ಧರ್ಮಸ್ಥಳದ ಸುರೇಂದ್ರಕುಮಾರ್ ಮಾತನಾಡಿ,ಬ್ರಿಟಿಷರಕಾಲಘಟ್ಟದಲ್ಲಿ ಆಚಾರ್ಯ ಶಾಂತಿಸಾಗರರುಜೈನ ಧರ್ಮದ ತತ್ವಗಳಾದ ಅಹಿಂಸೆ,ಸತ್ಯ,ಅಪರಿಗ್ರಹಮುಂತಾದವುಗಳನ್ನು ಭಾರತಾದ್ಯಂತಪ್ರಚಾರ ಮಾಡುವ ಮೂಲಕ ಧರ್ಮದಪುನರುತ್ಥಾನ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿಅನಿತಾ ಸುರೇಂದ್ರಕುಮಾರ,ನಾಗಶ್ರೀ ಮುಪ್ಪಾನೆ,ಡಾ.ಪದ್ಮಿನಿನಾಗರಾಜು,ರಾಜಕೀರ್ತಿಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net