

ಪ್ರಮುಖ ಮುಖ್ಯಾಂಶಗಳು
ಆದಾಯ ತೆರಿಗೆ (ಐ-ಟಿ) ಇಲಾಖೆಯೊಂದಿಗೆ 14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕ್ಕೆ ಸೇರಿದ್ದ 700 ಕೋಟಿ ರೂ. ಗಳಿಗೂ ಅಧಿಕ ಕಾರ್ಪಸ್ ನಿಧಿಯನ್ನು ಮರಳಿ ಪಡೆದಿದೆ.
ವಿಶ್ವವಿದ್ಯಾಲಯವು 1999ರಲ್ಲಿಯೇ 12(ಎ) ಅಡಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಅದನ್ನು ಸಾಬೀತುಪಡಿಸಲು ದಾಖಲೆಗಳು ಲಭ್ಯವಿರಲಿಲ್ಲ. ಅಂತಿಮವಾಗಿ ಆದಾಯ ತೆರಿಗೆ ಇಲಾಖೆಯ ಮುಂದೆ ಆರ್‌ಟಿಐ ಅರ್ಜಿ ಸಲ್ಲಿಸಿ, 199ರ ಪ್ರವೇಶ ನೋಂದಣಿ (ಎಂಟ್ರಿ ರಿಜಿಸ್ಟರ್) ಪಡೆದುಕೊಳ್ಳುವ ಮೂಲಕ ವಿವಿ ಹಣವನ್ನು ಮರಳಿ ಪಡೆಯುತ್ತಿದ್ದೇವೆ.
— - ಪ್ರೊ. ಎಸ್. ವಿದ್ಯಾಶಂಕರ್, ಕುಲಪತಿ, ವಿಟಿಯು