ಕೃತಕ ಬುದ್ಧಿಮತ್ತೆ ವ್ಯಾಪಕ ಅಳವಡಿಕೆಗೆ ಸಲಹೆ; 64ನೇ ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಸಭೆ

64ನೇ ವಿಷನ್ ಗ್ರೂಪ್ ಸಭೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಡಾ.ಕಿರಣ್ ಮಜೂಂದಾರ್ ಶಾ, ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.
64ನೇ ವಿಷನ್ ಗ್ರೂಪ್ ಸಭೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಡಾ.ಕಿರಣ್ ಮಜೂಂದಾರ್ ಶಾ, ಸರ್ಕಾರದ ಕಾರ್ಯದರ್ಶಿ ಡಾ.ಎನ್.ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ಧಿಮತ್ತೆ ವ್ಯಾಪಕ ಅಳವಡಿಕೆಗೆ ಸಲಹೆ
  • 64ನೇ ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಸಭೆ
  • ಡಾ.ಕಿರಣ್ ಮಜೂಂದಾರ್ ಶಾ ನೇತೃತ್ವದಲ್ಲಿ ನಡೆದ ಸಭೆ

ಬೆಂಗಳೂರು: ಕೃತಕಬುದ್ಧಿಮತ್ತೆ (ಎಐ)ಆಧಾರಿತ ಜೈವಿಕತಂತ್ರಜ್ಞಾನ ನಾವೀನ್ಯತೆಕ್ಷೇತ್ರದಲ್ಲಿ ಕರ್ನಾಟಕವುಜಾಗತಿಕ ನಾಯಕತ್ವ ಸಾಧಿಸುವಸಾಮರ್ಥ್ಯ ಹೊಂದಿದ್ದು,ಈ ತಂತ್ರಜ್ಞಾನವನ್ನುಹೆಚ್ಚು ವ್ಯಾಪಕವಾಗಿ ಅಳವಡಿಸಿಕೊಳ್ಳುವಅಗತ್ಯವಿದೆ ಎಂದು ಜೈವಿಕ ತಂತ್ರಜ್ಞಾನವಿಷನ್ ಗ್ರೂಪ್ ಅಭಿಪ್ರಾಯಪಟ್ಟಿದೆ.

ಮಂಗಳವಾರನಡೆದ ಜೈವಿಕ ತಂತ್ರಜ್ಞಾನ ವಿಷನ್ಗ್ರೂಪ್‌ನ (ವಿಜಿಬಿಟಿ)ಸಭೆಯಲ್ಲಿ ಸಂಶೋಧನೆ, ರೋಗಪತ್ತೆ, ಹೊಸಔಷಧಗಳ ಅಭಿವೃದ್ಧಿ,ವಂಶವಾಹಿಗಳಅಧ್ಯಯನ, ನಿಖರಚಿಕಿತ್ಸಾ ವಿಧಾನಗಳು ಹಾಗೂ ಆರೋಗ್ಯಕ್ಷೇತ್ರದ ವಿವಿಧ ಸೇವೆಗಳಲ್ಲಿಗಮನಾರ್ಹ ಬೆಳವಣಿಗೆ ಸಾಧಿಸಲುಕರ್ನಾಟಕವು ವಿಪುಲ ಅವಕಾಶಗಳನ್ನುಹೊಂದಿದೆ ಎಂದು ಗ್ರೂಪ್‌ನ ಸದಸ್ಯರುಅಭಿಪ್ರಾಯಪಟ್ಟಿದ್ದಾರೆ.

ಬಯೊಕಾನ್ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ಶಾ ಅಧ್ಯಕ್ಷತೆಯಲ್ಲಿ ವಿಷನ್ಗ್ರೂಪ್‌ನ 64ನೆಸಭೆ ನಡೆಯಿತು.ಕೈಗಾರಿಕೆ,ಶೈಕ್ಷಣಿಕ,ಆರೋಗ್ಯ ಮತ್ತುಸಂಶೋಧನಾ ಸಂಸ್ಥೆಗಳ ಪ್ರಮುಖರುಸಭೆಯಲ್ಲಿ ಭಾಗವಹಿಸಿದ್ದರು.

ಕಿರಣ್ಮಜುಂದಾರ್ ಶಾ ಅವರು ಮಾತನಾಡಿ,ಕರ್ನಾಟಕವುಬೆಳವಣಿಗೆಯ ಮುಂದಿನ ಹಂತವನ್ನುಪ್ರವೇಶಿಸುತ್ತಿದ್ದಂತೆ, ಸಂಶೋಧನೆಗಳನ್ನುಪ್ರಯೋಗಾಲಯದಿಂದ ಮಾರುಕಟ್ಟೆಗೆತರುವುದಕ್ಕೆ ಆದ್ಯತೆ ನೀಡಬೇಕಾಗಿದೆ.ಜೈವಿಕ ತಂತ್ರಜ್ಞಾನನವೋದ್ಯಮಗಳಿಗೆ ತ್ವರಿತ ಲಾಭದನಿರೀಕ್ಷೆಯಿಲ್ಲದ ದೀರ್ಘಾವಧಿಯಹೂಡಿಕೆ, ಕೈಗಾರಿಕೆಗಳಜೊತೆಗೆ ಸದೃಢ ಸಹಭಾಗಿತ್ವ ಮತ್ತುನಿರಂತರ ಬೆಂಬಲದ ಅಗತ್ಯ ಇದೆ.ಔಷಧ ಅಭಿವೃದ್ಧಿ,ರೋಗ ಪತ್ತೆ,ನಿಖರ ಚಿಕಿತ್ಸಾವಿಧಾನಗಳು ಮತ್ತು ಜೈವಿಕ ತಯಾರಿಕೆಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನುಸೃಷ್ಟಿಸಲು,ಕರ್ನಾಟಕವುವಿಶೇಷ ಜೈವಿಕ ತಂತ್ರಜ್ಞಾನಕ್ಷೇತ್ರದಲ್ಲಿ ಹೂಡಿಕೆ ಉತ್ತೇಜಿಸುವಕ್ರಮಗಳ ಜೊತೆಗೆ,ಸಂಪೂರ್ಣ ಜೈವಿಕತಂತ್ರಜ್ಞಾನ ಕ್ಷೇತ್ರದಲ್ಲಿಎಐ ತಂತ್ರಜ್ಞಾನವನ್ನು ವ್ಯಾಪಕವಾಗಿಅಳವಡಿಸಿಕೊಳ್ಳಬೇಕಾಗಿದೆ ಎಂದರು.

ರಾಜ್ಯದಾದ್ಯಂತದಪ್ರಮುಖ ಜೈವಿಕ ತಂತ್ರಜ್ಞಾನಉಪಕ್ರಮಗಳ ಪ್ರಗತಿಯನ್ನು ಸಭೆಯಲ್ಲಿಪರಾಮರ್ಶಿಸಲಾಯಿತು.ಜೈವಿಕ ತಂತ್ರಜ್ಞಾನವಲಯದಲ್ಲಿ ನಾವೀನ್ಯತೆ,ವಾಣಿಜ್ಯೀಕರಣ,ಅತ್ಯಾಧುನಿಕತಯಾರಿಕೆ, ಕುಶಲಮಾನವ ಸಂಪನ್ಮೂಲ ಅಭಿವೃದ್ಧಿಮತ್ತು ಬಂಡವಾಳ ಹೂಡಿಕೆ ತ್ವರಿತಗೊಳಿಸಲುಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಚರ್ಚಿಸಲಾಯಿತು.

ಸಭೆಯಲ್ಲಿಡಾ. ಜಿ.ಪದ್ಮನಾಭನ್,ಡಾ.ದೇವಿ ಶೆಟ್ಟಿ,ಡಾ.ತಸ್ಲಿಮರಿಫ್ಸಯ್ಯದ್, ಡಾ.ವಿಶಾಲ್ ರಾವ್,ಡಾ.ಮುರಳಿ ರಾಮಚಂದ್ರಮತ್ತಿತರರು ಭಾಗವಹಿಸಿದ್ದರು.

ಕರ್ನಾಟಕದ ಜೈವಿಕ ತಂತ್ರಜ್ಞಾನ ನಾಯಕತ್ವವು ಪ್ರತಿಭೆ, ನಾವೀನ್ಯತೆ ಮತ್ತು ಸಹಯೋಗದ ಬಲವಾದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಸಂಶೋಧನೆ ಮತ್ತು ನಾವೀನ್ಯತೆಯಿಂದ ಉದ್ಯಮಶೀಲತೆ, ತಯಾರಿಕೆ ಮತ್ತು ಕಾರ್ಯಪಡೆಯ ಅಭಿವೃದ್ಧಿಯವರೆಗೆ ಸಂಪೂರ್ಣ ಜೈವಿಕ ತಂತ್ರಜ್ಞಾನ ಮೌಲ್ಯ ಸರಪಳಿಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ.

— ಡಾ.ಎನ್. ಮಂಜುಳಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net