4.5 ಲಕ್ಷ ರೂ. ಉಳಿತಾಯ ಬಜೆಟ್​ಗೆ ಅನುಮೋದನೆ

ಮುನವಳ್ಳಿ ಪುರಸಭೆಯಲ್ಲಿ 2026&27ನೇ ಸಾಲಿನ ಬಜೆಟ್​ಗೆ ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಉಪಾಧ್ಯ ಡಿ.ಡಿ.ಕಿನ್ನೂರಿ ಹಾಗೂ ಸದಸ್ಯರು ಅನುಮೋದನೆ ನೀಡಿದರು. ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಇತರರಿದ್ದರು.
ಮುನವಳ್ಳಿ ಪುರಸಭೆಯಲ್ಲಿ 2026&27ನೇ ಸಾಲಿನ ಬಜೆಟ್​ಗೆ ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಉಪಾಧ್ಯ ಡಿ.ಡಿ.ಕಿನ್ನೂರಿ ಹಾಗೂ ಸದಸ್ಯರು ಅನುಮೋದನೆ ನೀಡಿದರು. ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಇತರರಿದ್ದರು.
Published on
ಮುನವಳ್ಳಿ: ಪಟ್ಟಣದ ಪುರಸಭೆಯಲ್ಲಿ 2026&27ನೇ ಸಾಲಿಗೆ 4.05 ಲ ರೂ. ಮೊತ್ತದ ಉಳಿತಾಯ ಬಜೆಟ್​ಗೆ ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಸರ್ವ ಸದಸ್ಯರು ಮಂಗಳವಾರ ಅನುಮೋದನೆ ನೀಡಿದರು.
2026&27ನೇ ಸಾಲಿನಲ್ಲಿ 16.22 ಕೋಟಿ ರೂ. ಜಮೆ ಹಾಗೂ 16.18 ಕೋಟಿ ರೂ. ಖರ್ಚು ಇದರಲ್ಲಿ
ಎಸ್​ಎ್​ಸಿ ಮುಕ್ತನಿಧಿಯಡಿ ರಸ್ತೆ ಕಾಮಗಾರಿ 7 ಲಕ್ಷ ರೂ., ಚರಂಡಿ ಕಾಮಗಾರಿಗೆ 75 ಲಕ್ಷ ರೂ., ನೀರು ಸರಬರಾಜು ನಿರ್ವಹಣೆಗೆ 45 ಲಕ್ಷ ರೂ., ಬೀದಿದೀಪ ನಿರ್ವಹಣೆಗೆ 10 ಲ ರೂ., ನತ್ಯಾಜ್ಯ ನಿರ್ವಹಣೆಗೆ 50 ಲಕ್ಷ ರೂ., ಕೌನ್ಸಿಲ್​ ವೆಚ್ಚ 89 ಲಕ್ಷ ರೂ., ಕಟ್ಟಡ ದುರಸ್ತಿಗೆ 45 ಲಕ್ಷ ರೂ. ಹಾಗೂ ಇತರ ಖರ್ಚಿಗೆ
5 ಲಕ್ಷ ರೂ. ಸೇರಿ ಇನ್ನಿತರ ಅಂದಾಜು ವೆಚ್ಚಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಪುರಸಭೆ ಸದಸ್ಯ ಸುಭಾಸ ಗಿದಿಗೌಡ್ರ, ಶ್ರೀಕಾಂತ ಮಲಗೌಡ್ರ ಮಾತನಾಡಿ, ಪಟ್ಟಣದ ವಿವಿಧ
ವಾರ್ಡ್​ಗಳ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಉಪಾಧ್ಯ ಡಿ.ಡಿ.ಕಿನ್ನೂರಿ, ಸದಸ್ಯರಾದ ಮೀರಾಸಾಬ್​ ವಟ್ನಾಳ, ಸುಭಾಸಗೌಡ ಗಿದಿಗೌಡ್ರ, ಶ್ರೀಕಾಂತ ಮಲಗೌಡ್ರ, ಗುರುಶಾಂತ ಚಂದರಗಿ, ಸಿ.ಬಿ.ಬಾಳಿ, ಶ್ರೀಶೈಲ ನೇಗಿನಾಳ, ಸಮೀವುಲ್ಲಾ ಚೂರಿಖಾನ್​, ಬಸವರಾಜ ದೊಡ್ಡಮನಿ, ಶೀತಲ್​ ಗೋಮಾಡಿ, ಲಲಿತಾ ರೇವಡಗಿ,
ರೇವತಿ ಬಾರಕೇರ, ಬಸವರಾಜ ದೊಡ್ಡಮನಿ, ಸಲೀಂಮಲ್ಲಿಕ್​ ಬೆಳವಡಿ, ಕೆ.ಎಚ್​.ಹಿರೇಮೇತ್ರಿ, ಶಂಕ್ರವ್ವ ಗೋಕಾಕ, ಎಚ್​.ಕೆ.ದನದಮನಿ, ಕಸ್ತೂರಿ ಗಂಗಣ್ಣವರ, ಪುರಸಭೆ ಮುಖ್ಯಾಧಿಕಾರಿ
ಎಂ.ಎಂ.ತಿಮ್ಮಾಣಿ, ಕಂದಾಯ ಅಧಿಕಾರಿ
ಅನಿಲ ಗಿಡ್ನಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net