ಭಾರತದಲ್ಲೇ ಮೊದಲ ಬಾರಿ 4,000 ಎಲೆಕ್ಟ್ರಿಕ್ ಬಸ್‌ಗಳ ಸಂಚಾರ: ಒಲೆಕ್ಟ್ರಾ ಐತಿಹಾಸಿಕ ಸಾಧನೆ/olectras
ಹಿಮಾಚಲ ಪ್ರದೇಶದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಾಗೂ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರು ಒಲೆಕ್ಟ್ರಾದ 4,000ನೇ ಎಲೆಕ್ಟ್ರಿಕ್ ಬಸ್‌ಗೆ ಚಾಲನೆ ನೀಡಿದರು
Published on:
Copied
Follow Us
ಮುಂಬೈ: ದೇಶದ ವಿದ್ಯುತ್ ಚಾಲಿತ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸಿರುವ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಸಂಸ್ಥೆ ಭಾರತದ ರಸ್ತೆಗಳಲ್ಲಿ 4,000 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವ ಮೂಲಕ ಮೊದಲ ಇವಿ ವಾಹನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶಾದ್ಯಂತ ಸಂಚರಿಸುತ್ತಿರುವ ಒಲೆಕ್ಟ್ರಾದ ಎಲೆಕ್ಟ್ರಿಕ್ ಬಸ್‌ಗಳು ಇದುವರೆಗೆ 730 ಮಿಲಿಯನ್‌ಗಿಂತ ಹೆಚ್ಚು ಕಿಲೋ ಮೀಟರ್‌ಗಳನ್ನು ಕ್ರಮಿಸಿದೆ. ಇದರಿಂದ 6.5 ಲಕ್ಷ ಟನ್‌ಗಿಂತ ಹೆಚ್ಚು ಕಾರ್ಬನ್ ಡೈಆಕ್ಸೈಡ್ (ಇ) ಹೊರಸೂಸುವಿಕೆ ತಡೆಗಟ್ಟಲಾಗಿದ್ದು, ಪರಿಸರ ಸ್ನೇಹಿ ಹಾಗೂ ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿರ್ಮಾಣದಲ್ಲಿ ಇದು ಮಹತ್ವದ ಕೊಡುಗೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಲ್ಲೂ ಒಲೆಕ್ಟ್ರಾದ ಎಲೆಕ್ಟ್ರಿಕ್ ಬಸ್‌ಗಳು ಸಾವಿರಾರು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಮುಂಬೈನ ಬೆಸ್ಟ್, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ , ಪುಣೆಯ ಪಿಎಂಪಿಎಲ್ ಹಾಗೂ ಠಾಣೆ ಮಹಾನಗರ ಪಾಲಿಕೆ -ಟಿಎಂಸಿ ಈಗಾಗಲೇ ಒಲೆಕ್ಟ್ರಾ ಬಸ್‌ಗಳನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಸದ್ಯ ಸುಗಮ ಪ್ರಯಾಣ, ಶಬ್ದರಹಿತ ಸಂಚಾರ ಹಾಗೂ ಮಾಲಿನ್ಯರಹಿತ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಒಲೆಕ್ಟ್ರಾ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ಇದು ಕೇವಲ ಕಂಪನಿಯ ಸಾಧನೆಯಲ್ಲ, ಭಾರತದ ವಿದ್ಯುತ್ ಚಾಲಿತ ಸಾರಿಗೆ ಕ್ಷೇತ್ರದ ಹೆಮ್ಮೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವಾಸಾರ್ಹ ಉತ್ಪನ್ನಗಳ ಮೂಲಕ ದೇಶದ ಹಸಿರು ಸಾರಿಗೆ ಕ್ರಾಂತಿಗೆ ನಾವು ಮುನ್ನಡೆ ನೀಡಲಿದ್ದೇವೆ. ಎಂಇಐಎಲ್ ಸಮೂಹದ ಅಂಗ ಸಂಸ್ಥೆಯಾಗಿರುವ ಒಲೆಕ್ಟ್ರಾ, ದೇಶದ ಅತಿದೊಡ್ಡ ಸಂಪೂರ್ಣ ಎಲೆಕ್ಟ್ರಿಕ್ ಬಸ್ ಹಾಗೂ ಎಲೆಕ್ಟ್ರಿಕ್ ಟಿಪ್ಪರ್ ತಯಾರಿಕಾ ಸಂಸ್ಥೆಯಾಗಿದೆ. ಹೈದರಾಬಾದ್ ಕೇಂದ್ರ ಕಚೇರಿಯನ್ನು ಹೊಂದಿರುವ ಕಂಪನಿಯು ನಗರ ಹಾಗೂ ಅಂತರನಗರ ಸಾರಿಗೆಗೆ ಅತ್ಯಾಧುನಿಕ ವಿದ್ಯುತ್ ವಾಹನಗಳನ್ನು ವಿನ್ಯಾಸಗೊಳಿಸಿ ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 8,500ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಆರ್ಡರ್ ಬುಕ್ ಹೊಂದಿರುವ ಒಲೆಕ್ಟ್ರಾ, ದೇಶಾದ್ಯಂತ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದ್ದು, ಸುರಕ್ಷಿತ, ಸುಸ್ಥಿರ ಮತ್ತು ಶೂನ್ಯ ಮಾಲಿನ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.