371(ಜೆ) ಸಮರ್ಪಕ ಅನುಷ್ಠಾನ ಇಲ್ಲ

ಕಲಬುರಗಿ ಹಮಾಲವಾಡಿ ಪ್ರದೇಶದ ಹಸನಖಾನ ಭವನದ ಗ್ರಂಥಾಲಯದಲ್ಲಿ ಡಿವೈಎಫ್​ಐ, ಎಸ್​ಎಫ್​ಐ ಜಂಟಿಯಾಗಿ ಆಯೋಜಿಸಿದ್ದ 371(ಜೆ), ಎಸ್​ಐಆರ್​ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಎ.ಧನರಾಜ್​ ಮಾತನಾಡಿದರು. ಲವಿತ್ರ ವಸದ, ಪ್ರೊ.ಆರ್​.ಕೆ.ಹುಡಗಿ, ಸರ್ವೇಶ ಮಾವಿನಕರ್​, ಪ್ರಮೋದ ಪಂಚಾಳ ಇತರರಿದ್ದರು.
ಕಲಬುರಗಿ ಹಮಾಲವಾಡಿ ಪ್ರದೇಶದ ಹಸನಖಾನ ಭವನದ ಗ್ರಂಥಾಲಯದಲ್ಲಿ ಡಿವೈಎಫ್​ಐ, ಎಸ್​ಎಫ್​ಐ ಜಂಟಿಯಾಗಿ ಆಯೋಜಿಸಿದ್ದ 371(ಜೆ), ಎಸ್​ಐಆರ್​ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಎ.ಧನರಾಜ್​ ಮಾತನಾಡಿದರು. ಲವಿತ್ರ ವಸದ, ಪ್ರೊ.ಆರ್​.ಕೆ.ಹುಡಗಿ, ಸರ್ವೇಶ ಮಾವಿನಕರ್​, ಪ್ರಮೋದ ಪಂಚಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಧನರಾಜ್​ ಹೇಳಿಕೆ
  • ಕಲಬುರಗಿಯಲ್ಲಿ ನಡೆದ ಎಸ್​ಐಆರ್​ ಕಾರ್ಯಾಗಾರ
ಕಲಬುರಗಿ: ಶೈಕ್ಷಣಿಕ, ಆರ್ಥಿಕ, ಉದ್ಯೋಗ ಸೇರಿ ಈ ಭಾಗದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರೆತಿದೆ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ ಎಂದು ಗಂಗಾವತಿ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಎ.ಧನರಾಜ ಕಳವಳ ವ್ಯಕ್ತಪಡಿಸಿದರು.
ನಗರದ ಹಮಾಲವಾಡಿ ಏರಿಯಾದಲ್ಲಿರುವ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್​ ಗ್ರಂಥಾಲಯದಲ್ಲಿ ಡಿವೈಎಫ್​ಐ ಮತ್ತು ಎಸ್​ಎಫ್​ಐ ಯುವಜನ ಸಂಟನೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 371(ಜೆ) ಹಾಗೂ ಎಸ್​.ಐ.ಆರ್​ ಕುರಿತು ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಉದ್ಯೋಗ ಅಭಿವೃದ್ಧಿಗಾಗಿ ಸರ್ಕಾರ ಪ್ರತಿವರ್ಷ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಭಾಗದ ಅಭಿವೃದ್ಧಿ ಕಾಣುತ್ತಿಲ್ಲ. ಈ ಭಾಗದ ಸರ್ಕಾರಿ ಶಾಲೆಗಳಲ್ಲಿ 22 ಸಾವಿರ ಶಿಕರ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆ ಭರ್ತಿ ಮಾಡದೇ ಶಾಲಾ ಮಕ್ಕಳ ಶೈಕ್ಷಣಿಕ ವಲಯಕ್ಕೆ ಕೊಳ್ಳಿ ಇಡುತ್ತಿದೆ. ಆಡಳಿತ ಪದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ದೂರಿದರು.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಲೇ ನಗರದ ಪ್ರಥಮ ದರ್ಜೆ ಕಾಲೇಜಿನ ಮೇಲ್ಛಾವಣಿ ಕುಸಿದು ಬಿದ್ದಿದೆ. ತರಗತಿಯ ನಡೆಯುವಾಗಲೇ ಈ ದುರ್ಟನೆ ಸಂಭವಿಸಿದೆ. ಶಾಲಾ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಹಣ ಬೀದರ ಮತ್ತು ಕಲಬುರಗಿ ನಗರದ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸುಮಾರು ತಲಾ 11 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ದುರಂತ. ಇದರಿಂದ ಕೆಕೆಆರ್​ಡಿಬಿಯ ಇಂತಹ ಕ್ರಮವನ್ನು ಯುವಕರು, ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕಾಗಿದೆ ಎಂದು ಹೇಳಿದರು.
ಸಾಹಿತಿ ಡಾ.ಅರುಣ ಜೋಳದ ಕೂಡ್ಲಿಗಿ ಅವರು ಎಸ್​.ಐ.ಆರ್​ ಕುರಿತು ಮಾತನಾಡಿ, ಬೇಡವಾದ ಮತದಾರರನ್ನು ಮತದಾರರ ಪಟ್ಟಿಯಿಂದಲೇ ತೆಗೆಯುವುದಕ್ಕೆ ಈ ಪದ್ದತಿ ತರಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಚುನಾವಣಾ ಆಯೋಗ ಲಾಂತರ ಮತದಾರರನ್ನು ಪಟ್ಟಿಯಿಂದಲೇ ಹೊರ ಹಾಕುವುದಕ್ಕೆ ದೊಡ್ಡ ಮಟ್ಟದಲ್ಲಿ ರಾಜಕೀಯ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಡಿವೈಎಫ್​ಐ ರಾಜ್ಯಾಧ್ಯೆ ಲವಿತ್ರ ವಸದ ಅಧ್ಯೆತೆ ವಹಿಸಿದ್ದರು. ಚಿಂತಕ ಪ್ರೊ.ಆರ್​.ಕೆ.ಹುಡಗಿ, ಎಸ್​ಎಫ್​ಐ ಜಿಲ್ಲಾಧ್ಯ ಸರ್ವೇಶ ಮಾವಿನಕರ್​, ಡಿವೈಎಫ್​.ಐ ಜಿಲ್ಲಾ ಸಂಚಾಲಕ ಪ್ರಮೋದ ಪಂಚಾಳ ಇತರರಿದ್ದರು.
"

ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಳಕೆ ಮಾಡಬೇಕಾದ ಕೆಕೆಆರ್​ಡಿಬಿ ಅನುದಾನ ವಿಮಾನ ನಿಲ್ದಾಣಗಳಿಗೆ ನೀಡುತ್ತಿರುವುದು ಬೇಸರದ ಸಂಗತಿ. ಶಿಕ್ಷಕರ ಖಾಲಿ ಹುದ್ದೆ ಭರ್ತಿ ಸೇರಿ ರಾಜ್ಯ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ.

— ಎ.ಧನರಾಜ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಗಂಗಾವತಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net