

ಪ್ರಮುಖ ಮುಖ್ಯಾಂಶಗಳು
ಯೂತ್ಫಾರ್ ನೇಶನ್ ಮತ್ತು ಸ್ವದೇಶಿಜಾಗರಣ ಸಂಯುಕ್ತ ಆಶ್ರಯದಲ್ಲಿ,ದೇಶೀಯ ಉದ್ಯಮಶೀಲತೆ,ಆತ್ಮನಿರ್ಭರತೆಮತ್ತು ಗ್ರಾಮನಗರ ಆರ್ಥಿಕ ಬಲವರ್ಧನೆಯಉದ್ದೇಶದಿಂದ ನಿವೃತ್ತ ಯೋಧರಿಂದ3.5 ಸಾವಿರಕಿ.ಮೀ.ಸ್ವದೇಶಿ ಉದ್ಯಮಜಾಗೃತಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಡಿ.13ರಿಂದಆರಂಭವಾಗುವ ಈ ಜಾಥಾ ಕರ್ನಾಟಕದಪ್ರತಿಯೊಂದು ಜಿಲ್ಲೆಯನ್ನುಸಂಪರ್ಕಿಸಿ,ಸ್ವದೇಶಿ ಉತ್ಪಾದನೆ,ಕಲೆಗಾರಿಕೆ,ಕೃಷಿಕೈಗಾರಿಕೆಮತ್ತು ಸ್ಥಳೀಯ ಉದ್ಯಮಗಳಿಗೆಬೆಂಬಲದ ಸಂದೇಶವನ್ನು ತಲುಪಿಸಲಿದೆ.
ಸುದ್ದಿಗೋಷ್ಠಿಯಲ್ಲಿಈ ಕುರಿತು ಮಾಹಿತಿ ನೀಡಿದ ಪರಿಪೂರ್ಣಸನಾತನ ಚಾರಿಟೇಬಲ್ ಟ್ರಸ್ಟ್ಅಧ್ಯಕ್ಷ ಡಾ.ಎ.ವಿ.ಶ್ರೀನಿವಾಸನ್,ನಿವೃತ್ತ ಯೋಧರಜೊತೆ ಜಾಥಾದಲ್ಲಿ ಮಹಿಳೆಯರು,ವಿದ್ಯಾರ್ಥಿಗಳು,ಹಾಗೂ ವಿವಿಧಕ್ಷೇತ್ರಗಳ ಯುವಕರು ಪಾಲ್ಗೊಳ್ಳಲಿದ್ದಾರೆ.ಸಂವಹನ ಕಾರ್ಯಕ್ರಮಗಳು,ಗ್ರಾಮನಗರಸಂವಾದಗಳು ಮತ್ತು ಸ್ಥಳೀಯ ಉತ್ಪನ್ನಗಳಪ್ರಚಾರ ಕಾರ್ಯಗಳು ನಡೆಯಲಿವೆ.ಜಾಗತಿಕ ವ್ಯಾಪಾರಅಸ್ಥಿರತೆ ಮತ್ತು ವಿದೇಶಿ ಆಮದುಅವಲಂಬನೆಯ ನಡುವೆ,ದೇಶೀಯ ಉತ್ಪಾದನೆಯಬಲವರ್ಧನೆ ರಾಷ್ಟ್ರದ ಆರ್ಥಿಕಭದ್ರತೆಗೆ ಅಗತ್ಯವಾಗಿದೆ ಎಂದುತಿಳಿಸಿದರು.ಅಭಿಯಾನಕ್ಕೆವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಸುದ್ದಿಗೋಷ್ಠಿಯಲ್ಲಿನಿವೃತ್ತ ಐಪಿಎಸ್ ಅಧಿಕಾರಿಭಾಸ್ಕರ್ ರಾವ್,ಬ್ರಿಗೇಡಿಯರ್ರವಿ ಮುನಿಸ್ವಾಮಿ ಉಪಸ್ಥಿತರಿದ್ದರು.