ನಂದೂರಿನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯೋತ್ಸವ ಸಂಭ್ರಮ
Photo
Published on:
Copied
Follow Us
ಕಲಬುರಗಿ: ಉಭಯ ನಂದೂರಿನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜ ಅವರ 287ನೇ ಜಯಂತ್ಯೋತ್ಸವದ ನಿಮಿತ್ತ ಹಾಸ್ಯ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶಾಸಕ ಬಸವರಾಜ್ ಮತ್ತಿಮುಡ್ ಅವರು ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ದೀಪ ಬೆಳಗಿಸಿ ಚಾಲನೆ ನೀಡಿದರು.
ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ್ ಮತ್ತಿಮೂಡ್ ಅವರು,
“ಅತಿ ಶ್ರೇಷ್ಠ ಸಂತರಲ್ಲಿ ಶ್ರೇಷ್ಠರಾದ ಸಂತ ಸೇವಾಲಾಲ್ ಮಹಾರಾಜರು ಜಾತಿ–ಧರ್ಮ ಮೀರಿ ಸಮಾನತೆಯನ್ನು ಸಾರಿದ ಮಹಾನ್ ಸಂತರು. ಹಗಲಿರುಳು ದುಡಿಯುವ ಸಮಾಜವೆಂದರೆ ಬಂಜಾರ ಸಮಾಜ. ಸೇವಾಲಾಲ್ ಮಹಾರಾಜರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ” ಎಂದು ಹೇಳಿದರು.
ನಾನು ಎರಡು ಬಾರಿ ಶಾಸಕರಾಗಲು ಸಾಧ್ಯವಾದುದು ಬಾಬುಸಿಂಗ್ ಮಹಾರಾಜ ಪೀರಾಧಿಪತಿಗಳು ಹಾಗೂ ಪೌರಾಗರ್‌ಗಳ ಆಶೀರ್ವಾದದಿಂದ ಎಂದು ತಿಳಿಸಿದ ಅವರು,
“ಗೌರ್ ಬಂಜಾರ ಸಮಾಜವು ಮೊದಲಿನಿಂದಲೂ ನನ್ನ ಮೇಲೆ ಅಪಾರ ಪ್ರೀತಿ ತೋರಿದೆ. ನನ್ನನ್ನು ಆಶೀರ್ವದಿಸಿದ ಈ ಸಮಾಜಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ” ಎಂದು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಭಾವನಾತ್ಮಕವಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಾಬುಸಿಂಗ್ ಮಹಾರಾಜ ಪೀರಾಧಿಪತಿಗಳು ಪೌರಾಗರ್, ಬಳಿರಾಮ ಮಹಾರಾಜರು, ಜೇಮಸಿಂಗ್ ಮಹಾರಾಜರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ ರಾಠೋಡ ವಹಿಸಿದ್ದರು.
ವೇದಿಕೆಯಲ್ಲಿ ಗಂಗಾಧರ ಆರ್. ಹಿರೇಮಠ, ವಿಜಯಕುಮಾರ ರಾಠೋಡ, ರಾಜಕುಮಾರ ಚವ್ಹಾಣ (ಆರ್.ಎಂ.ಸಿ), ಅರವಿಂದ ಚವಾಣ್, ಈಶ್ವರ ರಾಥೋಡ್, ಸಂತೋಷ್ ಪವಾರ್, ಯುವರಾಜ್ ರಾಥೋಡ್, ಶಿವಾಜಿ ರಾಥೋರ್, ರಾಜು ಚವಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಾಸ್ಯ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವು ಜನರನ್ನು ಮನೋರಂಜಿಸುವ ಜೊತೆಗೆ ಸಂತ ಸೇವಾಲಾಲ್ ಮಹಾರಾಜರ ಜೀವನ ಸಂದೇಶಗಳನ್ನು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು.