ನಗರಸಭೆಯ ಪೌರಾಯುಕ್ತ ವಿ.ಶ್ರೀಧರ್ ನೇತೃತ್ವದಲ್ಲಿ ನಗರದಲ್ಲಿನ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ಸಾಗಿಸಲು ನಾಲ್ಕು ತಂಡ ರಚಿಸಲಾಗಿತ್ತು. ಕೆಜಿಎಫ್ ಮುಖ್ಯ ರಸ್ತೆಯಿಂದ 33 ಟನ್ ಕಸ, ರಾಮಸಮುದ್ರಂ ಮುಖ್ಯ ರಸ್ತೆಯಲ್ಲಿ 170 ಟನ್, ಕೆ.ಬೈಯಪ್ಪನಹಳ್ಳಿ ಹಾಗೂ ಮಲ್ಲನಾಯಕನಹಳ್ಳಿ ರಸ್ತೆಗಳಿಂದ 180 ಟನ್ ಮತ್ತು ನ್ಯಾಯಾಲಯಗಳ ಕಟ್ಟಡಗಳ ಸಂಕೀರ್ಣ ರಸ್ತೆಯಿಂದ 280 ಟನ್ ಹಾಗೂ ಕೋಲಾರ ಶ್ರೀನಿವಾಸಪುರ ರಸ್ತೆಯಿಂದ 90 ಟನ್ ಹಾಗೂ ಬಿಡಿ ಕಸ 100 ಟನ್ ಸೇರಿ ಒಟ್ಟು 853 ಟನ್ ಹಾಗೂ ಹಳೆಯ ಕಟ್ಟಡಗಳ 1,950 ಟನ್ ತ್ಯಾಜ್ಯವನ್ನು 7 ಜೆಸಿಬಿ, 4 ಟಿಪ್ಪರ್ಗಳಲ್ಲಿ ವಿಲೇವಾರಿ ಮಾಡಲಾಗಿದೆ.